ಎರಡೇ ನಿಮಿಷದಲ್ಲಿ ಮುಗಿಯುತ್ತದೆ! ನಟಿ ರೆಜಿನಾ ಹೇಳಿದ ಅಶ್ಲೀಲ ಜೋಕ್ಸ್​ ಕೇಳಿ ಆ್ಯಂಕರ್​ ಶಾಕ್​, ವಿಡಿಯೋ ವೈರಲ್​

Regina
Published on

ಹೈದರಾಬಾದ್​: ನಟಿಯರಾದ ರೆಜಿನಾ ಕ್ಯಾಸ್ಸಂದ್ರ ಮತ್ತು ನಿವೇತಾ ಥಾಮಸ್ ಬಿಡುಗಡೆಗೆ ಸಿದ್ಧವಾಗಿರುವ ಶಾಕಿನಿ ಡಾಕಿನಿ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಸಾಕಷ್ಟು ಮಾಧ್ಯಮ ಸಂದರ್ಶನಗಳಲ್ಲಿ ರೆಜಿನಾ, ನಿವೇತಾ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನದ ವೇಳೆ ರಜಿನಾ ಮಾಡಿರುವ ವಯಸ್ಕರ ಜೋಕ್ಸ್​ ಒಂದು ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ​

ವಿಡಿಯೋದಲ್ಲಿ ಮಾತನಾಡಿರುವ ರಜಿನಾ, ನನ್ನ ಬಳಿ ಹೇಳಲು ಒಂದು ಜೋಕ್ಸ್​ ಇದೆ. ಅದನ್ನು ನೀವು ಅರ್ಥ ಮಾಡಿಕೊಳ್ತೀರೋ? ಇಲ್ಲವೋ? ನನಗೆ ಗೊತ್ತಿಲ್ಲ, ಅದೇನೇ ಇರಲಿ, ಪುರುಷರು ಮತ್ತು ಮ್ಯಾಗಿ ಎರಡು ಕೂಡ ಒಂದೆ. ಏಕೆಂದರೆ, ಎರಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ ಎಂದಿದ್ದಾರೆ. ಈ ವೇಳೆ ಆ್ಯಂಕರ್​ಗೆ ತಕ್ಷಣ ಏನು ಎಂಬುದು ಅರ್ಥ ಆಗಲಿಲ್ಲ. ರೆಜಿನಾ ಸುಳಿವು ನೀಡಿದ ಬಳಿಕ ಆ್ಯಂಕರ್​ಗೆ ಇರುಸುಮುರುಸಾಗಿದ್ದು, ಅವರ ಮುಖಭಾವದಲ್ಲಿ ಕಾಣುತ್ತಿತ್ತು.

ನಿವೇತಾ ಥಾಮಸ್​ ಕೂಡ ರೆಜಿನಾ ಪಕ್ಕದಲ್ಲಿ ಕುಳಿತಿದ್ದರು. ರಜಿನಾ ಹೇಳಿದ ಜೋಕ್ಸ್​ ಕೇಳಿ ಸಣ್ಣದಾಗಿ ನಗು ನೀಡಿದರು. ಆದರೆ, ಹೆಚ್ಚೇನೂ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಈ ಜೋಕ್ಸ್​ ಹಿಂದಿನ ಸಂದರ್ಭವು ಇನ್ನೂ ತಿಳಿದಿಲ್ಲ, ಆದರೆ ಇದು ನಿಜವಾಗಿಯೂ ಸಂದರ್ಶನದ ಭಾಗವೇ ಅಥವಾ ಉದ್ದೇಶಪೂರ್ವಕವಾಗಿ ಜಾಲತಾಣದಲ್ಲಿ ಸೋರಿಕೆಯಾಗಿದೆಯೇ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net