ಸಿಡ್ನಿ: ಆಸ್ಪ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ಗೆ ನಮ್ಮ ಭಾರತ ಅಂದರೆ ಅಚ್ಚಮೆಚ್ಚು ಎಂಬುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಇಲ್ಲಿನ ಸಿನಿಮಾಗಳ ಬಗ್ಗೆ ವಾರ್ನರ್ಗೆ ಅಗಾಧವಾದ ಪ್ರೀತಿ ಇದೆ. ಅದಕ್ಕೆ ಸಾಕ್ಷಿಯಾಗಿ ಅವರ ಇನ್ಸ್ಟಾಗ್ರಾಂನಲ್ಲಿ ನಮ್ಮ ಭಾರತೀಯ ಹಾಡುಗಳಿಗೆ ಕುಟುಂಬದ ಜತೆ ಯಾವಾಗಲೂ ಹೆಜ್ಜೆ ಹಾಕುತ್ತಿರುತ್ತಾರೆ.
ಬಿಡುವಿನ ಸಮಯದಲ್ಲಿ ಹೆಚ್ಚು ಕುಟುಂಬದ ಜತೆ ಸಮಯ ಕಳೆಯುವ ವಾರ್ನರ್ ಪತ್ನಿ ಮತ್ತು ಮಕ್ಕಳೊಂದಿಗೆ ಸೇರಿ ಭಾರತೀಯ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡಿ, ಆ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಡುತ್ತಾರೆ. ಹೆಚ್ಚಾಗಿ ದಕ್ಷಿಣ ಭಾರತದ ಸಿನಿಮಾಗಳೆಂದರೆ ವಾರ್ನರ್ಗೆ ಒಲವು. ಇದೀಗ ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ “ಶ್ರೀವಲ್ಲಿ” ಹಾಡಿಗೆ ವಾರ್ನರ್ ಸ್ಟೆಪ್ ಹಾಕಿದ್ದಾರೆ.
ತೆಲುಗು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರೂ ಕೂಡ ವಾರ್ನರ್ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಅದಕ್ಕೆ ಕಾರಣ ಅವರು ಡಾನ್ಸ್ ಮಾಡಲು ಆಯ್ದುಕೊಂಡು ಹಾಡು ಕನ್ನಡ ಅವತರಣಿಕೆ. ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ. ಮೂಲ ಭಾಷೆ ತೆಲುಗು ಆದರೂ, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗಿದೆ.
ವಾರ್ನರ್ ತಾವು ಡಾನ್ಸ್ ಮಾಡಲು “ನೋಟ ಬಂಗಾರವಾಯಿತೆ ಶ್ರೀವಲ್ಲಿ” ಎಂದು ಆರಂಭವಾಗುವ ಕನ್ನಡ ಅವತರಣಿಕೆ ಹಾಡನ್ನು ಆಯ್ಕೆ ಮಾಡಿಕೊಂಡಿರುವುದು ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಹೀಗಾಗಿ ಅನೇಕರು ಕಾಮೆಂಟ್ ಮೂಲಕ ವಾರ್ನರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಕೆಲವರು ವಾರ್ನರ್ ಆರ್ಸಿಬಿ ಬರಬಹುದು. ಇದು ಅದರ ಸೂಚನೆ ಆಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ವಾರ್ನರ್ ಅವರನ್ನು ಹೈದರಾಬಾದ್ ತಂಡ ಇತ್ತೀಚೆಗಷ್ಟೇ ಕೈಬಿಟ್ಟಿದೆ.
View this post on Instagram
ಇನ್ನು ವಾರ್ನರ್ ಹೆಜ್ಜೆ ಹಾಕಿರುವ ವಿಡಿಯೋ 13 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಇನ್ನು ಕನ್ನಡದ ಹಾಡಿಗೆ ವಾರ್ನರ್ ವಿಡಿಯೋ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಗಳ ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ಚೌಕಾ ಚಿತ್ರದ “ಅಪ್ಪ ಐ ಲವ್ ಯು ಪಾ” ಚಿತ್ರದ ಹಾಡನ್ನು ಬಳಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ವಿಡಿಯೋಗೆ 14 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿತ್ತು. ವಾರ್ನರ್ ಕನ್ನಡ ಪ್ರೀತಿಗೆ ನಮ್ಮ ಕನ್ನಡಿಗರು ಬಹಳ ಫಿದಾ ಆಗಿದ್ದರು.
View this post on Instagram
ನಮ್ಮ ಭಾರತವನ್ನು ಸದಾ ಕಾಲ ನೆನೆಯುವ ವಾರ್ನರ್ ಮೇಲೆ ಭಾರತೀಯರ ಪ್ರೀತಿ ಹೆಚ್ಚಾಗಿದೆ. ಭಾರತದಲ್ಲೇ ಹೆಚ್ಚು ಪ್ರೀತಿಸುವ ವಿದೇಶಿ ಕ್ರಿಕೆಟಿಗ ಎಂಬುದಕ್ಕೆ ಇದು ಕಾರಣವಾಗಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರ್ನರ್ ಅವರು ಈ ಹಿಂದೆ ತೆಲುಗು ಚಿತ್ರದ ಬುಟ್ಟು ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದು ಬಹಳ ವೈರಲ್ ಆಗಿತ್ತು. ಇಷ್ಟೇ ಇಲ್ಲ ಈ ರೀತಿಯ ಅನೇಕ ಭಾರತೀಯ ಹಾಡಿಗೆ ವಾರ್ನರ್ ಕುಟುಂಬದ ಜತೆ ಹೆಜ್ಜೆ ಹಾಕಿರುವುದು ಭಾರತೀಯರ ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಅವರ ಇನ್ಸ್ಟಾಗ್ರಾಂ ಚೆಕ್ ಮಾಡಿದರೆ ಬಹುತೇಕ ಭಾರತೀಯ ಸಿನಿಮಾ ಹಾಡುಗಳೇ ಕಾಣಸಿಗುತ್ತವೆ. (ಏಜೆನ್ಸೀಸ್)
ನಿಮ್ಮ ಕನ್ನಡ ಪ್ರೀತಿಗೆ ಚಿರಋಣಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ವಾರ್ನರ್ಗೆ ಕನ್ನಡಿಗರ ಸಲಾಂ
ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್
ಯೂಟ್ಯೂಬ್ ವಿಡಿಯೋಗಳೆಲ್ಲ ನಿಜವೆಂದು ನಂಬಿದ್ರೆ ನಿಮಗೂ ಇದೇ ಗತಿ ಆಗ್ಬಹುದು ಹುಷಾರ್..!