ಸಿಡ್ನಿ: ಆಸ್ಪ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ಗೆ ನಮ್ಮ ಭಾರತ ಅಂದರೆ ಅಚ್ಚಮೆಚ್ಚು ಎಂಬುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಇಲ್ಲಿನ ಸಿನಿಮಾಗಳ ಬಗ್ಗೆ ವಾರ್ನರ್ಗೆ ಅಗಾಧವಾದ ಪ್ರೀತಿ ಇದೆ. ಅದಕ್ಕೆ ಸಾಕ್ಷಿಯಾಗಿ ಅವರ ಇನ್ಸ್ಟಾಗ್ರಾಂನಲ್ಲಿ ನಮ್ಮ ಭಾರತೀಯ ಹಾಡುಗಳಿಗೆ ಕುಟುಂಬದ ಜತೆ ಯಾವಾಗಲೂ ಹೆಜ್ಜೆ ಹಾಕುತ್ತಿರುತ್ತಾರೆ.
ಬಿಡುವಿನ ಸಮಯದಲ್ಲಿ ಹೆಚ್ಚು ಕುಟುಂಬದ ಜತೆ ಸಮಯ ಕಳೆಯುವ ವಾರ್ನರ್ ಪತ್ನಿ ಮತ್ತು ಮಕ್ಕಳೊಂದಿಗೆ ಸೇರಿ ಭಾರತೀಯ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡಿ, ಆ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಡುತ್ತಾರೆ. ಹೆಚ್ಚಾಗಿ ದಕ್ಷಿಣ ಭಾರತದ ಸಿನಿಮಾಗಳೆಂದರೆ ವಾರ್ನರ್ಗೆ ಒಲವು. ಐಪಿಎಲ್ನಲ್ಲಿ ಹೈದರಾಬಾದ್ ತಂಡದ ನಾಯಕರಾಗಿರುವ ವಾರ್ನರ್ ಹೆಚ್ಚು ತೆಲುಗು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಇದೀಗ ಹೊಸ ಬೆಳವಣಿಗೆಯಲ್ಲಿ ವಾರ್ನರ್ ಅವರು ಕನ್ನಡ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ. ಮಗಳ ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ಚೌಕಾ ಚಿತ್ರದ “ಅಪ್ಪ ಐ ಲವ್ ಯು ಪಾ” ಚಿತ್ರದ ಹಾಡನ್ನು ಬಳಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಾರ್ನರ್ ಕನ್ನಡ ಪ್ರೀತಿಗೆ ನಮ್ಮ ಕನ್ನಡಿಗರು ಬಹಳ ಫಿದಾ ಆಗಿದ್ದಾರೆ.
ಅಪ್ಲೋಡ್ ಮಾಡಿದ 20 ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳು ಹರಿದುಬಂದಿದ್ದು, ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ನಿಮ್ಮ ವಿಡಿಯೋದಲ್ಲಿ ಕನ್ನಡ ಹಾಡು ಕೇಳಿ ನಮಗೆ ನಿಜಕ್ಕೂ ಸಂತೋಷವಾಯಿತು. ನಮ್ಮ ದೇಶ ಹಾಗೂ ನಮ್ಮ ಭಾಷೆ ಕನ್ನಡ ಹಾಗೂ ನಮ್ಮ ಸಂಸ್ಕೃತಿಯ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಾವು ಚಿರಋಣಿ ಎಂದು ಕನ್ನಡಿಗರು ವಾರ್ನರ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಇನ್ನು ನಮ್ಮ ಭಾರತವನ್ನು ಸದಾ ಕಾಲ ನೆನೆಯುವ ವಾರ್ನರ್ ಮೇಲೆ ಭಾರತೀಯರ ಪ್ರೀತಿ ಹೆಚ್ಚಾಗಿದೆ. ಭಾರತದಲ್ಲೇ ಹೆಚ್ಚು ಪ್ರೀತಿಸುವ ವಿದೇಶಿ ಕ್ರಿಕೆಟಿಗ ಎಂಬುದಕ್ಕೆ ಇದು ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರ್ನರ್ ಅವರು ಈ ಹಿಂದೆ ತೆಲುಗು ಚಿತ್ರದ ಬುಟ್ಟು ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದು ಬಹಳ ವೈರಲ್ ಆಗಿತ್ತು. ಇಷ್ಟೇ ಇಲ್ಲ ಈ ರೀತಿಯ ಅನೇಕ ಭಾರತೀಯ ಹಾಡಿಗೆ ವಾರ್ನರ್ ಕುಟುಂಬದ ಜತೆ ಹೆಜ್ಜೆ ಹಾಕಿರುವುದು ಭಾರತೀಯರ ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಅವರ ಇನ್ಸ್ಟಾಗ್ರಾಂ ಚೆಕ್ ಮಾಡಿದರೆ ಬಹುತೇಕ ಭಾರತೀಯ ಸಿನಿಮಾ ಹಾಡುಗಳೇ ಕಾಣಸಿಗುತ್ತವೆ. (ಏಜೆನ್ಸೀಸ್)
ಹಾಟ್ ಫೋಟೋ ಹರಿಬಿಟ್ಟ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ: ಹಸಿನ್ ಮಾದಕ ನೋಟಕ್ಕೆ ನೆಟ್ಟಿಗರು ಫಿದಾ!
ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆ: ಅಂದು ಮನೆಯ ಮೇಲೆ ನಡೆದ ಭಯಾನಕ ಘಟನೆ ಬಿಚ್ಚಿಟ್ಟ ಮಾಲೀಕ