ತನ್ನ ಮದುವೆ ದಿಬ್ಬಣದಲ್ಲಿ ಸೊಂಟ ಬಳುಕಿಸಿದ ವಧುವಿಗೆ ಖುಲಾಯಿಸಿದ ಲಕ್​: ಹುಡುಕಿಕೊಂಡು ಬಂತು ಬಿಗ್​ ಆಫರ್!​

Bulletu Bandi
Published on

ಹೈದರಾಬಾದ್​: ತಮ್ಮ ಮದುವೆ ದಿಬ್ಬಣದಲ್ಲಿ "ನೀ ಬುಲೆಟ್ಟು ಬಂಡಿ" ಎಂಬ ಟಪ್ಪಾಂಗುಚ್ಚಿ ಹಾಡಿಗೆ ನವವಧು ಒಬ್ಬರು ತನ್ನ ಪತಿಯೊಂದಿಗೆ ಸೊಂಟ ಬಳುಕಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತದಂತೆ ವಧುವಿಗೆ ಒಳ್ಳೆಯ ಆಫರ್​ ಒಂದು ಒಲಿದು ಬಂದಿದೆ.

ಗಾಯಕ ಮೋಹನ್​ ಭೋಗರಾಜು ಹಾಡುಗಳನ್ನು ನಿರ್ಮಿಸುವ ಮನರಂಜನಾ ಕಂಪನಿಯೊಂದು ವಧುವಿಗೆ ಆಫರ್​ ಒಂದನ್ನು ನೀಡಿದೆ. ಕಂಪನಿಯ ಹೆಸರು ಬ್ಲ್ಯೂ ರಾಬಿಟ್​ ಎಂಟರ್​ಟೈನ್ಮೆಂಟ್​. ತಮ್ಮ ಮುಂದಿನ ಹಾಡಿಗೆ ಹೆಜ್ಜೆ ಹಾಕುವ ಅವಕಾಶವನ್ನು ಮದುವೆ ದಿಬ್ಬಣದಕಲ್ಲಿ ಕುಪ್ಪಳಿಸಿದ ವಧುವಿಗೆ ನೀಡುವುದಾಗಿ ಕಂಪನಿಯ ಮ್ಯಾನೇಜರ್​ ಘೋಷಣೆ ಮಾಡಿದ್ದಾರೆ.

ವಿವರಣೆಗೆ ಬರುವುದಾದರೆ, ವಧವಿನ ಹೆಸರು ಸಾಯಿ ಶ್ರೀಯಾ. ಈಕೆ ಅರಣ್ಯ ಇಲಾಖೆಯ ಉದ್ಯೋಗಿ ರಾಮು ಮತ್ತು ಸುರೇಖಾ ದಂಪತಿಯ ಹಿರಿಯ ಮಗಳು. ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ಜನ್ನಾರ ಮೂಲದವರು. ಇದೇ ತಿಂಗಳ 14ರಂದು ರಾಮಕೃಷ್ಣಪುರದ ಅಕುಲಾ ಅಶೋಕ್​ ಎಂಬುವರನ್ನು ಶ್ರೀಯಾ ವರಿಸಿದರು.

ಮದುವೆಯ ದಿಬ್ಬಣದ ವೇಳೆ ಶ್ರೀಯಾ "ನೀ ಬುಲೆಟ್ಟು ಬಂಡಿ" ಎಂಬ ಜಾನಪದ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ರಾತ್ರೋರಾತ್ರಿ ಫೇಮಸ್​ ಆಗಿದ್ದಾರೆ. ಶ್ರೀಯಾ ಡ್ಯಾನ್ಸ್​ ನೋಡಿ ಅನೇಕ ನೆಟ್ಟಿಗರು ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಹಾಡನ್ನು ಕೇಳಿರುವ ಬ್ಲ್ಯೂ ರಾಬಿಟ್​ ಎಂಟರ್​ಟೈನ್ಮೆಂಟ್​ ಕಂಪನಿ ತಕ್ಷಣ ಶ್ರೀಯಾ ಕರೆ ಮಾಡಿ ಮಾತನಾಡಿದೆ. ಮುಂದಿನ ಹಾಡಿನಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡುವುದಾಗಿ ಹೇಳಿದೆ. ಇದರಿಂದ ಖುಷಿಯಾಗಿರುವ ಶ್ರೀಯಾ, ಇಷ್ಟು ದೊಡ್ಡ ಅವಕಾಶ ಬರುವಾಗ ಬೇಡ ಎನ್ನಲು ಹೇಗೆ ಸಾಧ್ಯ ಎಂದಿದ್ದಾರೆ. ಮುಖ್ಯ ಪಾತ್ರದಲ್ಲಿ ಶೀಘ್ರದಲ್ಲೇ ಹೊಸ ಹಾಡಿನಲ್ಲಿ ಶ್ರೀಯಾ ನಟಿಸಲಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಪ್ರೈಮ್​ ಟೈಮ್​ ಟಿವಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net