More

    ನಟ ರಣವೀರ್​ ಸಿಂಗ್​​ ಕ್ಯಾಮೆರಾ ಮುಂದೆ ಬೆತ್ತಲಾಗಲು ಪಡೆದ ಸಂಭಾವನೆಯ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ಮುಂಬೈ: ಬಾಲಿವುಟ್​​ ಸ್ಟಾರ್​ ನಟ ರಣವೀರ್​ ಸಿಂಗ್​ ಅವರ ಬೆತ್ತಲೆ ಫೋಟೋಶೂಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ವಿಷಯವಾಗಿದೆ. ತಮ್ಮ ವಿಭಿನ್ನ ಉಡುಗೆ ಮತ್ತು ಫ್ಯಾಷನ್​​ನಿಂದಲೇ ಹೆಸರಾಗಿರುವ ರಣವೀರ್​, ತಮ್ಮ ಬೆತ್ತಲೆ ಫೋಟೋಶೂಟ್​ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಮಹಿಳೆಯರ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಅವರ ವಿರುದ್ಧ ಎಫ್​ಐಆರ್​ ಸಹ ದಾಖಲಾಗಿದೆ.

    ಇದೆಲ್ಲದರ ನಡುವೆ ಜನರ ಕುತೂಹಕಾರಿ ಪ್ರಶ್ನೆಯೊಂದಕ್ಕೆ ಇದೀಗ ಉತ್ತರ ಸಿಕ್ಕಿದೆ. ಯಾವುದು ಆ ಪ್ರಶ್ನೆ ಅಂತೀರಾ, ಬೆತ್ತಲೆ ಫೋಟೋಶೂಟ್​ಗಾಗಿ ರಣವೀರ್​ ಪಡೆದ ಸಂಭಾವನೆ ಎಷ್ಟು? ಎಂಬುದು. ಮ್ಯಾಗಜಿನ್​ ಮುಖಪುಟಕ್ಕಾಗಿ ರಣವೀರ್​ ಬೆತ್ತಲೆಯಾಗಿದ್ದು, ಅದಕ್ಕಾಗಿ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆಗಿಂತಲೂ ಹೆಚ್ಚಿನ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್​ ಸಂಧು ಅವರು ಟ್ವೀಟ್​ ಮಾಡಿದ್ದು, ರಣವೀರ್​ ಸಿಂಗ್​ ಅವರು ಮ್ಯಾಗಜಿನ್​ ಮುಖಪುಟಕ್ಕಾಗಿ ಬೆತ್ತಲಾಗಲು ಬರೋಬ್ಬರಿ 55 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ತಿಳಿದುಬಂದಿದೆ. ತಮ್ಮ ಹಿಂದಿನ ಸಿನಿಮಾ 83 ಮತ್ತು ಜೊಯೆಶಾಭಾಯ್​ ಜೋರ್ದಾರ್​ ಸಿನಿಮಾಗಳ ಸಂಭಾವನೆಗಿಂತಲೂ ಅಧಿಕ ಎಂದು ಹೇಳಲಾಗಿದೆ. ಅಲ್ಲದೆ, 83 ಸಿನಿಮಾವನ್ನು ರಣವೀರ್​ ತಮ್ಮದೇ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿದ್ದರು. ಆ ಸಿನಿಮಾದಿಂದ ನಷ್ಟವನ್ನು ಭರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ರಣವೀರ್​ ಬೆತ್ತಲೆ ಫೋಟೋಶೂಟ್​ ಭಾರಿ ಸದ್ದು ಮಾಡಿದ್ದಲ್ಲದೆ, ವಿವಾದಕ್ಕೆ ಗುರಿಯಾಗಿದೆ. ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್​ ವಿರುದ್ಧ ಮುಂಬೈ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್​ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್​ ಅಡಿಯಲ್ಲಿ ಮುಂಬೈನ ಚೆಂಬೂರ್​ ಠಾಣಾ ಪೊಲೀಸರು ಮಂಗಳವಾರ ಎಫ್​ಐಆರ್​ ದಾಖಲಿಸಿದ್ದಾರೆ.

    ಪೂರ್ವ ಮುಂಬೈ ಉಪನಗರ ಮೂಲದ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಗಳು ಮತ್ತು ಮಹಿಳಾ ವಕೀಲರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದಾರೆ. ರಣವೀರ್​ ಅವರು ತಮ್ಮ ಬೆತ್ತಲೆ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಮಹಿಳೆಯರ ನಮ್ರತೆಗೆ ಅಪಮಾನ ಎಸಗಿದ್ದಾರೆ ಎಂದು ಎನ್‌ಜಿಒ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ರಣವೀರ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

    ಅಂದಹಾಗೆ ರಣವೀರ್​ ಅವರು ಮ್ಯಾಗಜಿನ್‌ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಣವೀರ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ ಮತ್ತು ಪರ-ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ಪತ್ನಿ ದೀಪಿಕಾ ಪಡುಕೋಣೆ, ಆಲಿಯಾ ಭಟ್​, ನಟ ಅರ್ಜುನ್​ ಕಪೂರ್​, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರಣವೀರ್​ ಪರ ಬ್ಯಾಟ್​ ಬೀಸಿದ್ದಾರೆ. ಆದರೆ, ಕೆಲವರು ರಣವೀರ್​ ನಗ್ನ ಫೋಟೋಶೂಟ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಲಾಸ್ಟ್​ ಟೈಂ ಯಾವಾಗ ಲೈಂಗಿಕ ಕ್ರಿಯೆ ನಡೆಸಿದ್ರಿ! ವಿಜಯ್​ಗೆ ಕರಣ್​ ಪ್ರಶ್ನೆ, ನಾನು ಗೆಸ್​ ಮಾಡ್ಲಾ ಎಂದ ಅನನ್ಯಾ

    ಹೈದರಾಬಾದ್​ ಗ್ಯಾಂಗ್​ರೇಪ್​ ಕೇಸ್​: MLA ಪುತ್ರ ಸೇರಿದಂತೆ ನಾಲ್ವರು ಅಪ್ರಾಪ್ತ ಆರೋಪಿಗಳಿಗೆ ಜಾಮೀನು ಮಂಜೂರು

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವ ED ಅಧಿಕಾರವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts