ನಟಿ ದೀಪ್ತಿಯನ್ನು ಮದ್ವೆ ಆಗೋದಾದ್ರೆ ಈ ಷರತ್ತುಗಳಿಗೆ ಒಪ್ಪಲೇಬೇಕು ತೆಲುಗಿನ ಖ್ಯಾತ ಯೂಟ್ಯೂಬರ್​ ಶನ್ನು!

Deepti
Published on

ಹೈದರಾಬಾದ್​: ಷಣ್ಮುಖ ಜಸ್ವಂತ್ ಅಲಿಯಾಸ್​ ಶನ್ನು… ಈ ಹೆಸರು ತೆಲುಗು ಮಂದಿಗೆ ತುಂಬಾ ಪರಿಚಿತ. ಏಕೆಂದರೆ, ಯೂಟ್ಯೂಬ್​ನಲ್ಲಿ ಭಾರೀ ಸಂಚಲನ ಮೂಡಿಸಿರುವ ಶನ್ನು ತೆಲುಗಿನ ಪ್ರಖ್ಯಾತ ಯೂಟ್ಯೂಬರ್​. 4 ಮಿಲಿಯನ್​ ಫಾಲೋವರ್ಸ್​ ಹೊಂದಿದ ತೆಲಗಿನ ಮೊದಲ ಯೂಟ್ಯೂಬರ್​ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಪ್ರಸ್ತುತ ಅವರು ತೆಲುಗು ಬಿಗ್​ಬಾಸ್​ ಸಿಸನ್​ 5ರ ಸ್ಪರ್ಧಿಯು ಆಗಿದ್ದಾರೆ.

ಕಿರುಚಿತ್ರ, ಡ್ಯಾನ್ಸ್​ ವಿಡಿಯೋ ಮೂಲಕ ಶನ್ನು ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. ಅದರಲ್ಲೂ ಅರೇ ಎಂಟ್ರಾ ಇಧಿ… ಡೈಲಾಗ್​ ಅಂತೂ ಸಿಕ್ಕಾಪಟ್ಟೆ ಫೇಮಸ್​. ಬಿಗ್​ಬಾಸ್​ ವೇದಿಕೆ ಮೇಲೆ ಸ್ವತಃ ನಾಗಾರ್ಜುನ್​ ಕೂಡ ಆ ಡೈಲಾಗ್​ ಹೊಡೆದಿದ್ದರು.​ ಇನ್ನು ಶನ್ನು ಪ್ರೀತಿಯಲ್ಲಿ ಬಿದ್ದಿರುವ ವಿಚಾರವೂ ಜಗಜ್ಜಾಹೀರು. ಅದನ್ನು ಬಿಗ್​ಬಾಸ್​ ವೇದಿಕೆಯಲ್ಲೂ ಹಂಚಿಕೊಂಡಿದ್ದರು. ದೀಪ್ತಿ ಕೂಡ ಹೇಳಿಕೊಂಡಿದ್ದಾರೆ. ಬಿಗ್​ಬಾಸ್​ನಲ್ಲಿ ಶನ್ನು ಗೆಲುವಿಗಾಗಿ ದೀಪ್ತಿ ಪ್ರಚಾರ ಕೂಡ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಶನ್ನು ಪೋಷಕರು ಷಣ್ಮುಖ-ದೀಪ್ತಿ ವಿವಾಹದ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಳನ್ನು ಮಾಡಿದ್ದಾರೆ. ಅವರಿಬ್ಬರ ಪ್ರೀತಿ ಬಗ್ಗೆ ಮೊದಲು ಗೊತ್ತಿರಲಿಲ್ಲ, ಟಿವಿಯಲ್ಲಿ ನೋಡಿದ ನಂತರವಷ್ಟೇ ಗೊತ್ತಾಯಿತು ಎಂದಿದ್ದಾರೆ. ದೀಪ್ತಿಯನ್ನು ಲವ್​ ಮಾಡುತ್ತಿರುವ ಬಗ್ಗೆ ಶನ್ನು ನಮಗೆ ಹೇಳಿರಲಿಲ್ಲ. ಇಬ್ಬರು ಯೂಟ್ಯೂಬ್​ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಇಬ್ಬರು ಒಳ್ಳೆಯ ಫ್ರೆಂಡ್ಸ್​ ಎಂದು ಭಾವಿಸಿದ್ದೆವು. ಆದರೆ, ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬುದು ಟಿವಿ ನೋಡಿದ ಮೇಲೆ ಗೊತ್ತಾಯಿತು ಎಂದಿದ್ದಾರೆ.

ಟಿವಿಯಿಂದ ಗೊತ್ತಾದ ಬಳಿಕ ಶನ್ನು ನಮಗೆ ಎಲ್ಲವನ್ನು ತಿಳಿಸಿದ. ನಮಗೂ ಇಷ್ಟವಾಗಿದೆ. ಆದರೆ, ದೀಪ್ತಿ ಕುಟುಂಬಕ್ಕೆ ಇಷ್ಟವಾದರೆ ಮಾತ್ರ ನಮಗೂ ಇಷ್ಟವಾಗುತ್ತದೆ. ಅವರ ಕುಟುಂಬಕ್ಕೆ ವಿರುದ್ಧವಾಗಿ ಮದುವೆ ಮಾಡಲು ಆಗುವುದಿಲ್ಲ. ದೀಪ್ತಿ ಪಾಲಕರು ಏನು ಹೇಳಿದ್ದಾರೆ ಎಂಬುದು ಈಗಲು ಸಹ ನಮಗೆ ಗೊತ್ತಿಲ್ಲ. ಆದರೆ, ಇಬ್ಬರ ಮದುವೆಗೆ ತುಂಬಾ ಸಮಯವಿದೆ. ಶನ್ನು ಹಿರಿಯ ಸಹೋದರ ಇನ್ನೂ ಮದುವೆ ಆಗಿಲ್ಲ. ಮೊದಲು ಆತನ ಮದುವೆ ಆಗಬೇಕು. ಶನ್ನು ಮದುವೆಗೆ ಇನ್ನು ಮೂರರಿಂದ ನಾಲ್ಕು ವರ್ಷಗಳಾಗುತ್ತವೆ ಎಂದು ಶನ್ನು ಪಾಲಕರು ಹೇಳಿದ್ದಾರೆ.

ಇನ್ನು ಶನ್ನು ಮತ್ತು ದೀಪ್ತಿ ಸೋಶಿಯಲ್​ ಮೀಡಿಯಾದಲ್ಲಿ ಪ್ರಖ್ಯಾತ ಜೋಡಿಯಾಗಿದ್ದಾರೆ. ಅನೇಕ ಡ್ಯಾನ್ಸ್​ ವಿಡಿಯೋಗಳನ್ನು ಒಟ್ಟಿಗೆ ಮಾಡಿದ್ದಾರೆ. ಅನೇಕ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಬಿಗ್​ಬಾಸ್​ 5ನೇ ಆವೃತ್ತಿಗೆ ಶನ್ನು ಹೋದಾಗ ದೀಪ್ತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಟಿವಿಯಲ್ಲಿ ಪ್ರತಿದಿನ ನಿನ್ನನ್ನು ನೋಡಲು ಮತ್ತು ಹೆಮ್ಮೆ ಪಡಲು ಕಾಯಲು ಸಾಧ್ಯವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನಗಾಗಿ ಇರುತ್ತೇನೆಂದು ದೀಪ್ತಿ ಬರೆದುಕೊಂಡಿದ್ದಾರು. ದೀಪ್ತಿ ಸಿನಿಮಾದಲ್ಲೂ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net