ರಾಹುಲ್​, ಪಂತ್​ ಅಲ್ಲವೇ ಅಲ್ಲಾ... Ashwin​ ಪ್ರಕಾರ ಇವರೇ ನೋಡಿ ಟೀಮ್​ ಇಂಡಿಯಾದ ಭವಿಷ್ಯದ ಬ್ಯಾಟಿಂಗ್ ಪಿಲ್ಲರ್ಸ್

Yashasvi Jaiswal
Published on

ಕಾನ್ಪುರ: ಇಲ್ಲಿನ ಗ್ರೀನ್​ ಪಾರ್ಕ್​ ಸ್ಟೇಡಿಯಂನಲ್ಲಿ ನಡೆದ ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟೆಸ್ಟ್​ ಸರಣಿಯ (Test Series) ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಸರಣಿಯನ್ನು ಗೆದ್ದು ಬೀಗಿದ್ದಾರೆ. ಪಾಕಿಸ್ತಾನದ ಎದುರು ಟೆಸ್ಟ್​ ಸರಣಿಯಲ್ಲಿ ಐತಿಹಾಸಿಕ ಜಯ ದಾಖಲಿಸಿ ಹುಮ್ಮಸ್ಸಿನಲ್ಲಿದ್ದ ಪ್ರವಾಸಿ ಬಾಂಗ್ಲಾ ತಂಡವನ್ನು ಬಗ್ಗು ಬಡಿಯುವಲ್ಲಿ ಭಾರತ ಯಶಸ್ವಿಯಾಗಿದ್ದು, ಅಕ್ಟೋಬರ್​ 06ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ (T20 Series) ತಯಾರಿ ಆರಂಭಿಸಿದೆ.

ಇನ್ನೂ ಟೆಸ್ಟ್​ ಪಂದ್ಯವನ್ನು ಟಿ20 ಮಾದರಿಯಲ್ಲಿ ಆಡುವ ಮೂಲಕ ಹಿಟ್​ಮ್ಯಾನ್​ ರೋಹಿತ್​ ಶರ್ಮ ಪಡೆ ಹಲವು ದಾಖಲೆಗಳನ್ನು ಸರಿಗಟ್ಟಿದ್ದು, ಬ್ಯಾಟ್ಸ್​ಮನ್​ಗಳ ದಿಟ್ಟ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ಭಾರತ ತಂಡದ ಪ್ರದರ್ಶನದ ಕುರಿತು ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಆರ್. ಅಶ್ವಿನ್ (R Ashwin)​ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಈ ಇಬ್ಬರು ಬ್ಯಾಟ್ಸ್​ಮನ್​ಗಳ ಪಾತ್ರದ ಕುರಿತು ವಿವರಿಸಿದ್ದಾರೆ.

Jaiswal Gill

ನೋಡಿ, ಯಶಸ್ವಿ ಜೈಸ್ವಾಲ್ ವಿಶೇಷ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. ಅವನು ಮುಕ್ತವಾಗಿ ಮತ್ತು ಸ್ವಇಚ್ಛೆಯಿಂದ ಆಡುತ್ತಾನೆ. ಶುಭಮಾನ್ ಗಿಲ್ ಅವರಂತೆ ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಅವರಿಬ್ಬರೂ ಇನ್ನೂ ಟೆಸ್ಟ್ ಕ್ರಿಕೆಟ್​ನ ಆರಂಭಿಕ ಹಂತದಲ್ಲಿದ್ದು, ಭಾರತೀಯ ಕ್ರಿಕೆಟ್​ನ ಭವಿಷ್ಯದ ತಾರೆಗಳಾಗುತ್ತಾರೆ ಎಂಬುದನ್ನು ನಾನು ನಂಬಿದ್ದೇನೆ.

ಏಕೆಂದರೆ, ಸರಣಿಯಲ್ಲಿ ಮೂರು ಅರ್ಧಶತಕಗಳೊಂದಿಗೆ ಬೌಲರ್‌ಗಳಲ್ಲಿ ಪ್ರಾಬಲ್ಯ ಸಾಧಿಸುವ ಅವರ ಸಾಮರ್ಥ್ಯವು ದೀರ್ಘ ಸ್ವರೂಪದಲ್ಲಿ ಪ್ರಮುಖವಾದ ಮನೋಧರ್ಮವನ್ನು ಪ್ರದರ್ಶಿಸುತ್ತದೆ. ವಿಶ್ವಾಸಾರ್ಹ ಆರಂಭಿಕ ಆಟಗಾರನಾಗಿ ತನ್ನನ್ನು ತಾನು ಭದ್ರಪಡಿಸಿಕೊಂಡ ಗಿಲ್, ಮೊದಲ ಟೆಸ್ಟ್‌ನಲ್ಲಿ ತನ್ನ ಶತಕದೊಂದಿಗೆ ಬಲವಾದ ಪ್ರದರ್ಶನವನ್ನು ನೀಡಿದರು, ತಾಂತ್ರಿಕವಾಗಿ ಉತ್ತಮ ಮತ್ತು ಹೊಂದಿಕೊಳ್ಳಬಲ್ಲ ಆಟಗಾರ ಆತ ಎಂದು ಆರ್. ಅಶ್ವಿನ್ ಜೈಸ್ವಾಲ್​ ಹಾಗೂ ಗಿಲ್​ನ ಪಾತ್ರದ ಕುರಿತು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net