More

    ನಿನಗಿಂತ ನಾನೇನು ಕಮ್ಮಿ ಇಲ್ಲ! ಹೃತಿಕ್​ಗೆ ಸೆಡ್ಡೊಡೆದು ಗೌಪ್ಯ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ ಮಾಜಿ ಪತ್ನಿ

    ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಹೃತಿಕ್​ ರೋಷನ್ ಮತ್ತು​ ಹೊಸ ಗರ್ಲ್​ಫ್ರೆಂಡ್ ಸಾಬಾ ಅಜಾದ್​​ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇಬ್ಬರು ಬಹಳ ದಿನಗಳಿಂದ ಡೇಟಿಂಗ್​ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಮ್ಮೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಸಂಬಂಧವನ್ನು ಮತ್ತೆ ಚರ್ಚೆಗೆ ಎಳೆದು ತಂದಿದ್ದಾರೆ. ಇತ್ತ ಇದುವರೆಗೂ ತಮ್ಮ ಹೊಸ ಬಾಯ್​ಫ್ರೆಂಡ್ ಅರ್ಸ್ಲಾನ್ ಗೋನಿ​ ಜತೆ ಕದ್ದು ಮುಚ್ಚಿ ಓಡಾಡುತ್ತಿದ್ದ ಹೃತಿಕ್ ಮಾಜಿ ಪತ್ನಿ ಸುಸೇನ್​ ಖಾನ್​ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲೇ ಬಾಯ್​ಫ್ರೆಂಡ್​ ಜತೆ ಪ್ರತ್ಯಕ್ಷವಾಗುವ ಮೂಲಕ ಮಾಜಿ ಗಂಡನಿಗೆ ಟಾಂಗ್​ ನೀಡಿದ್ದಾರೆ.

    ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ನಿನ್ನೆ (ಏ. 5) ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಸಂಬಂಧದ ಬಗ್ಗೆ ಮತ್ತೊಮ್ಮೆ ಸುಳಿವು ನೀಡಿದ್ದಾರೆ. ಹೃತಿಕ್​ ಮಾಜಿ ಪತ್ನಿ ಸುಸೇನ್​ ಖಾನ್ ಮತ್ತು ಅವರ ಬಾಯ್​ಫ್ರೆಂಡ್​ ಅರ್ಸ್ಲಾನ್ ಗೋನಿ ಕೂಡ ಹೃತಿಕ್​ ನಡೆಯನ್ನೇ ಅನುಸರಿಸಿದ್ದಾರೆಂದು ತೋರುತ್ತದೆ. ಸುಸೇನ್​ ಮತ್ತು ಅರ್ಸ್ಲಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕೈ-ಕೈ ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೃತಿಕ್​ ಮತ್ತು ಸುಸೇನ್​ ಡಿವೋರ್ಸ್​ ಪಡೆದ ಬಳಿಕ ಸುಸೇನ್​ ಆಗಾಗ ಅರ್ಸ್ಲಾನ್ ಜತೆ ಕದ್ದು ಮುಚ್ಚಿ ಓಡಾಡುತ್ತಿದ್ದರು. ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಅಂತರ ಕಾಯ್ದುಕೊಂಡಿದ್ದ ಹೃತಿಕ್​, ಕೆಲವು ತಿಂಗಳಿಂದ ಗರ್ಲ್​ಫ್ರೆಂಡ್ ಸಾಬಾ ಅಜಾದ್​​ ಜತೆ ಡೇಟಿಂಗ್​ ನಡೆಸುತ್ತಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಒಂದೆರೆಡು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಡೇಟಿಂಗ್​ ಸುದ್ದಿಗೆ ಪುಷ್ಟಿ ಬಂದಿತು. ಹೃತಿಕ್​ ರಾಜಾರೋಷವಾಗಿ ಓಡಾಡುತ್ತಿರುವಾಗ ನಾನೇನು ಕಮ್ಮಿ ಎನ್ನುವಂತೆ ಇಷ್ಟು ದಿನ ಕದ್ದು ಮುಚ್ಚಿ ಬಾಯ್​ಫ್ರೆಂಡ್​ ಜತೆ ಓಡಾಡುತ್ತಿದ್ದ ಸುಸೇನ್​ ಖಾನ್​ ಇದೀಗ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಗೌಪ್ಯ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ.

    ಹಿಂದೊಮ್ಮೆ ಮದುವೆಯಾದ ಬಳಿಕವೂ ನಟಿ ಕಂಗನಾ ರಣಾವತ್‌ ಜತೆಗೆ ಸಂಬಂಧ ಹೊಂದಿ ನಂತರ ಆಕೆಗೆ ಮೋಸ ಮಾಡಿರುವ ಗಂಭೀರ ಆರೋಪ ಹೊತ್ತಿರುವ ಹೃತಿಕ್‌ ರೋಷನ್‌, ಪತ್ನಿ ಸುಸೇನ್‌ಗೆ 2014ರಲ್ಲಿ ವಿಚ್ಛೇದನ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಪಡೆದ ಬಳಿ ತಮ್ಮ 14 ವರ್ಷದ ದಾಂಪತ್ಯ ಜೀವನವನ್ನು ಅಂತಿಮಗೊಳಿಸಿದ್ದ ನಟ, ವಿಚ್ಛೇದನದ ನಂತರವೂ ಪತ್ನಿ, ಮಕ್ಕಳೊಂದಿಗೆ ಇದ್ದರು. ಒಟ್ಟಿಗೇ ಟ್ರಿಪ್‌ಗೆ ಹೋಗಿಯೂ ಸುದ್ದಿಯಾಗಿದ್ದರು.

    ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಸಬಾ ಆಜಾದ್​ ರಂಗಭೂಮಿ ನಟಿ ಕೂಡ ಹೌದು. ಚಿತ್ರರಂಗಕ್ಕೆ 2008ರಲ್ಲಿ ಕಾಲಿಟ್ಟಿದ್ದರು. 2008ರಲ್ಲಿ ಸಬಾ ಆಜಾದ್ ‘ದಿಲ್ ಕಬಡ್ಡಿ’ ಅನ್ನುವ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಬಳಿಕ 2011ರಲ್ಲಿ ತೆರೆಕಂಡ ‘ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಇವರು ಇದಾಗಲೇ ಸಾಕಷ್ಟು ಮ್ಯೂಸಿಕ್​ ವಿಡಿಯೋ​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಹೃತಿಕ್​ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ನಿಮಗೋಸ್ಕರ ಟೀ ಶರ್ಟ್​ ಬಿಚ್ತೀನಿ: ವೀಕ್ಷಕರಿಗೆ ಕೊಟ್ಟ ಭರವಸೆ ಉಳಿಸಿಕೊಂಡ ಪೂನಂ ಪಾಂಡೆ!

    ಮಣ್ಣು ಮಾಡಿ ಬಂದ ಮಾರನೇ ದಿನವೇ ಕುಟುಂಬಸ್ಥರಿಗೆ ಕಾದಿತ್ತು ಶಾಕ್​: ತಮಿಳುನಾಡಿನಲ್ಲಿ ಅಚ್ಚರಿಯ ಘಟನೆ!

    ಬೆಂಗ್ಳೂರಲ್ಲಿ ಕನ್ನಡ ಮಾತನಾಡಿದ್ದಕ್ಕೆ ಯುವಕನ ಕೊಲೆ! ಸ್ಫೋಟಕ ರಹಸ್ಯ ಬಿಚ್ಚಿಟ್ಟ ಹೋಂ ಮಿನಿಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts