ನಿಮಗೋಸ್ಕರ ಟೀ ಶರ್ಟ್​ ಬಿಚ್ತೀನಿ: ವೀಕ್ಷಕರಿಗೆ ಕೊಟ್ಟ ಭರವಸೆ ಉಳಿಸಿಕೊಂಡ ಪೂನಂ ಪಾಂಡೆ!

Poonam
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ನಡೆಸಿಕೊಡುತ್ತಿರುವ “ಲಾಕಪ್” ಹೆಸರಿನ ರಿಯಾಲಿಟಿ ಹಲವು ಸಂಗತಿಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್​ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ತಿರುಳಾಗಿದೆ. ಈ ಶೋ ಅನ್ನು ಎಕ್ತಾ ಕಪೂರ್​ ನಿರ್ಮಾಣ ಮಾಡುತ್ತಿದ್ದು, ಆಲ್ಟ್​ ಬಾಲಾಜಿ ಮತ್ತು ಎಂಎಕ್ಷ್​ ಪ್ಲೇಯರ್​ನಲ್ಲಿ 24X7 ಪ್ರಸಾರ ಮಡುತ್ತಿದೆ.

ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಸಿಕೊಡುವ ಕಂಗನಾ ಕೂಡ ವಿವಾದಗಳಿಂದ ಹೊರತಾಗಿಲ್ಲ. ಕಾರ್ಯಕ್ರಮ ಒಳ್ಳೆಯ ವೀಕ್ಷಣೆ ಪಡೆದುಕೊಳ್ಳುತ್ತಿದ್ದು, ಹೆಚ್ಚು ಸದ್ದು ಮಾಡುತ್ತಿದೆ. ಇದೇ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಮಾಡಲ್​ ಕಂ ನಟಿ ಪೂನಂ ಪಾಂಡೆ ತಮ್ಮ ವೀಕ್ಷಕರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನನಗೆ ವೋಟ್​ ಮಾಡಿ ನನ್ನನ್ನು ಉಳಿಸಿದರೆ ನಾನು ಲೈವ್​ ಕ್ಯಾಮೆರಾದಲ್ಲಿ ನನ್ನ ಟಿ-ಶರ್ಟ್​ ತೆಗೆಯುತ್ತೇನೆಂದು ಈ ಹಿಂದೆ ಪೂನಂ ಹೇಳಿದ್ದರು. ಚಾರ್ಜ್​ಶೀಟ್​ನಿಂದ ನನ್ನನ್ನು ಬಚಾವ್​ ಮಾಡಿ, ನಿಮಗೆ ಸರ್ಪ್ರೈಸ್​ ಕಾದಿದೆ ಎಂದಿದ್ದರು. ಇದೀಗ ಕ್ಯಾಮೆರಾ ಮುಂದೆ ಟಿ-ಶರ್ಟ್​ ತೆಗೆಯುವ ಮೂಲಕ ತಮ್ಮ ಮಾತನ್ನು ಪೂನಂ ಪಾಂಡೆ ಉಳಿಸಿಕೊಂಡಿದ್ದಾರೆ.

ನಾನು ನಿಯಮಗಳನ್ನು ಮುರಿಯಲಾರೆ. ಇದು ತುಂಬಾ ಸುಂದರವಾದ ವೇದಿಕೆಯಾಗಿದೆ ಮತ್ತು ಇದನ್ನು ವಿವಿಧ ವಯೋಮಾನದವರು ವೀಕ್ಷಿಸುತ್ತಾರೆ. ಹೀಗಾಗಿ ಜನರನ್ನು ಅಸಂತೋಷಗೊಳಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಆದರೂ, ನಾನು ಭರವಸೆಯನ್ನು ಪೂರೈಸಲು ಬಯಸುತ್ತೇನೆ, ಆದರೆ ಅದೇ ಸಮಯದಲ್ಲಿ, ನಾನು ಯಾವುದೇ ಮಿತಿಗಳನ್ನು ದಾಟಲು ಬಯಸುವುದಿಲ್ಲ. ನಾನು ಅದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ ಎಂದು ಕ್ಯಾಮೆರಾ ಮುಂದೆ ಪೂನಂ ಮಾತನಾಡಿದ್ದಾರೆ.

ನಾನು ಟೀ ಶರ್ಟ್ ಅನ್ನು ಸಂಪೂರ್ಣವಾಗಿ ತೆಗೆಯುವುದನ್ನು ನೋಡಲು ಕಾಯುತ್ತಿರುವ ಜನರಿಗೆ ಹೇಳಬಯಸುವುದೇನೆಂದರೆ, ನಾನು ಕಾರ್ಯಕ್ರಮದಿಂದ ಹೊರಗೆ ಬಂದಾಗ ನಾನು ಎಲ್ಲವನ್ನೂ ಮಾಡುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. ಈ ಇಡೀ ವಾರ ನಾನು ನಿಮಗೆ ಪೂರ್ಣ ಪ್ರಮಾಣದ ಮನರಂಜನೆಯನ್ನು ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದರು. ಡಿಯೋ ಮುಂದುವರಿದಂತೆ, ಪೂನಂ ತಾನು ವೀಕ್ಷಕರಿಗೆ ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದೇನೆ ಆದರೆ ತನ್ನ ಮಿತಿಯಲ್ಲಿಯೇ ನಾನು ಉಳಿದಿದ್ದೇನೆ ಎಂದು ಹೇಳಿದ್ದಾರೆ.

ಈ ಹಿಂದೆ ತನ್ನ ಸಹ-ಸ್ಪರ್ಧಿಗಳಾದ ಅಜ್ಮಾ ಫಲ್ಲಾಹ್, ಮುನಾವರ್ ಫರುಕಿ, ಅಂಜಲಿ ಅರೋರಾ, ವಿನಿತ್ ಕಾಕರ್ ಮತ್ತು ಇತರರ ಸಮ್ಮುಖದಲ್ಲೇ ಪೂನಂ ತನ್ನ ನಿರ್ಧಾರವನ್ನು ಘೋಷಿಸಿದರು. ಆದರೆ, ಅಜ್ಮಾ ಮತ್ತು ಮುನಾವರ್ ಏನು ತಯಾರಿ ನಡೆಸುತ್ತಿದ್ದಾರೆಂದು ಹಂಚಿಕೊಳ್ಳಲು ಒತ್ತಾಯಿಸಿದರು. ಅಲ್ಲದೆ, ಸರ್ಪ್ರೈಸ್​ ನೀಡುವವರೆಗೂ ಅದರ ಟ್ರೇಲರ್ ಅನ್ನು ಅಭಿಮಾನಿಗಳಿಗೆ ತೋರಿಸುವಂತೆ ಕಿಚಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ವಿನಿತ್, ಪೂನಂ ಸುಮ್ಮನೆ ಹೇಳುತ್ತಾಳಷ್ಟೇ, ಅವಳು ಏನನ್ನೂ ಮಾಡುವುದಿಲ್ಲ ಎಂದರು. ಇದಾದ ಬಳಿಕ ಲೈವ್​ ಕ್ಯಾಮೆರಾದಲ್ಲಿ ತನ್ನ ಟಿ-ಶರ್ಟ್ ತೆಗೆದುಹಾಕುವುದಾಗಿ ಪೂನಂ ಘೋಷಿಸಿದರು. ಇದನ್ನು ಕೇಳಿದ ಸ್ಪರ್ಧಿಗಳೆಲ್ಲ ಸುಮ್ಮನಾದರು, ಆದರೆ ಪೂನಂಗೆ ನಗು ತಡೆಯಲಾಗಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net