ಪಾರ್ಕ್​ನಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ದಾಳಿ: ಮುಖದಲ್ಲಿ 200 ಗಾಯ, ಭಯಾನಕ ವಿಡಿಯೋ ವೈರಲ್​

Pitbull
Published on

ಲಖನೌ: ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ನಾಯಿಯೊಂದು ದಾಳಿ ಮಾಡಿದ್ದು, ಬಾಲಕನ ಮುಖದ ಮೇಲೆ ಸುಮಾರು 200 ಗಾಯಗಳಾಗಿವೆ. ಈ ಘಟನೆ ಕಳೆದ ವಾರ ಘಾಜಿಯಾಬಾದ್​ನಲ್ಲಿ ನಡೆದಿದೆ.

ಮನೆಯ ಹತ್ತಿರದ ಪಾರ್ಕ್​ನಲ್ಲಿ ಆಟವಾಡುತ್ತಿದ್ದ ವೇಳೆ ನಾಯಿ ದಾಳಿ ಮಾಡಿದೆ. ಬಾಲಕನನ್ನು ಪುಷ್ಪ್​ ತ್ಯಾಗಿ ಎಂದು ಗುರುತಿಸಲಾಗಿದೆ. ಹುಡುಗಿಯೊಬ್ಬಳು ಪಿಟ್​ಬುಲ್​ ನಾಯಿಯೊಂದಿಗೆ ಪಾರ್ಕ್​ನಲ್ಲಿ ವಾಕಿಂಗ್​ ಮಾಡುವಾಗ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ದಾಳಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಒಬ್ಬ ವ್ಯಕ್ತಿ ಬಾಲಕನನ್ನು ರಕ್ಷಿಸುತ್ತಿರುವುದು ವಿಡಿಯೋದಲ್ಲಿದೆ. ಅಷ್ಟರಲ್ಲಾಗಲೇ ಪುಷ್ಪ್ ಮುಖದ ಒಂದು ಭಾಗವನ್ನು ನಾಯಿ ಕಚ್ಚಿತ್ತು. ಯಾವುದೇ ಪರವಾನಗಿ ಅಥವಾ ನೋಂದಣಿ ಇಲ್ಲದೆ ಪ್ರಾಣಿಯನ್ನು ಸಾಕಿದ ನಾಯಿಯ ಮಾಲೀಕರಿಗೆ 5000 ರೂ ದಂಡ ವಿಧಿಸಲಾಗಿದೆ.

ಮಾಲಕಿಯನ್ನೇ ಕೊಂದಿದ್ದ ಪಿಟ್​ಬುಲ್​

ಲಖನೌದ ಕೈಸರ್​ಬಾಘ್​ನಲ್ಲಿ ಸುಶೀಲಾ ತ್ರಿಪಾಠಿ ಎಂಬುವರು ತಮ್ಮ 25 ವರ್ಷದ ಮಗ ಅಮಿತ್​ ತ್ರಿಪಾಠಿ ಜೊತೆ ವಾಸವಿದ್ದರು. ಅಮಿತ್​, ಜಿಮ್​ ಟ್ರೈನರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಜುಲೈ 12ರಂದು ಸಾಕು ನಾಯಿ ಪಿಟ್​ ಬುಲ್​ ಸುಶೀಲಾ ಅವರ ಮೇಲೆ ದಾಳಿ ಮಾಡಿ ಭೀಕರವಾಗಿ ಕೊಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net