More

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರನಾದರೆ, ತೂಕ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ.

    ದಸರಾ ಉತ್ಸವಕ್ಕೆ ಆಗಮಿಸಿದ ಸಂದರ್ಭ ಹಾಗೂ ಉತ್ಸವ ಮುಗಿದು ಶಿಬಿರಕ್ಕೆ ತೆರಳುವ ಮುನ್ನ ಆನೆಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಈ ಬಾರಿ ಎರಡನೇ ತಂಡದ ಗಜಪಡೆಯ ಜತೆಗೆ ಮೊದಲ ತಂಡದ ಗಜಪಡೆಗೂ ಪುನಃ ತೂಕ ಪರೀಕ್ಷೆ ನಡೆಸಲಾಯಿತು.

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

    ನಗರದ ಧನ್ವಂತ್ರಿ ವೇ ಬ್ರಿಡ್ಜ್​ನಲ್ಲಿ ಶುಕ್ರವಾರ ನಡೆದ ಪರೀಕ್ಷೆಯಲ್ಲಿ ಅರ್ಜುನನೇ -(5,950 ಕೆ.ಜಿ.) ಬಲಶಾಲಿಯಾಗಿದ್ದಾನೆ. ಮೊದಲ ತೂಕದ ಪರೀಕ್ಷೆಯಲ್ಲಿ 5,775 ಕೆಜಿ ಇದ್ದ ಅರ್ಜುನ, ಒಂದು ತಿಂಗಳ ಅಂತರದಲ್ಲಿಯೇ 175 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಗೋಪಾಲಸ್ವಾಮಿ 5,460 ಕೆಜಿ ಇದ್ದು, ಎರಡನೇ ಸ್ಥಾನದಲ್ಲಿದ್ದಾನೆ. ಮೊದಲು 5,140 ಕೆಜಿ ಇದ್ದ ಈತ ಒಂದು ತಿಂಗಳ ನಂತರ 320 ಕೆಜಿ ಹೆಚ್ಚಿಸಿಕೊಂಡಿದ್ದಾನೆ. ಅಂಬಾರಿ ಆನೆ ಕ್ಯಾಪ್ಟನ್​ ಅಭಿಮನ್ಯು ಬರೋಬ್ಬರಿ 5,000 ಕೆಜಿ ಇದ್ದು, ಮೂರನೇ ಸ್ಥಾನದಲ್ಲಿದ್ದಾನೆ.

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ
    ಜಂಬೂಸವಾರಿ ಆನೆ ಅರ್ಜುನ

    ಭಲೇ ಭೀಮ!: ಒಂದು ತಿಂಗಳಲ್ಲಿ ಹೆಚ್ಚು ತೂಕ ಹೊಂದಿದ ಆನೆಗಳ ಪೈಕಿ ಭೀಮ ನಂಬರ್​ ಒನ್​ ಪಟ್ಟ ಪಡೆದಿದ್ದಾನೆ. 4,345 ಕೆಜಿ ತೂಕ ಹೊಂದಿರುವ ಭೀಮ, ಮೊದಲ ಪರೀಕ್ಷೆಯಲ್ಲಿ 3,920 ಕೆಜಿ ಇದ್ದ. 1 ತಿಂಗಳ ಅಂತರದಲ್ಲಿ ಬರೋಬ್ಬರಿ 425 ಕೆಜಿ ಏರಿದ್ದಾನೆ.

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ
    ಜಂಬೂಸವಾರಿ ಆನೆ ಭೀಮ

    ಉಳಿದಂತೆ ಮಹೇಂದ್ರ 4,450 ಕೆಜಿ ಇದ್ದಾನೆ. ಮೊದಲ ಪರೀಕ್ಷೆಯಲ್ಲಿ 4,250 ಕೆಜಿ ಇದ್ದ ಈತ ಒಂದು ತಿಂಗಳ ಅಂತರದಲ್ಲಿ 200 ಕೆಜಿ ಹೆಚ್ಚಾಗಿದ್ದಾನೆ. 4,890 ಕೆಜಿ ಇರುವ ಧನಂಜಯ ಮೊದಲ ತೂಕದ ಪರೀಕ್ಷೆಯಲ್ಲಿ 4,810 ಕೆಜಿ ಇದ್ದ. ಮೊದಲ ತಂಡದ ಹೆಣ್ಣಾನೆಗಳಾದ ಕಾವೇರಿ 3,245 (ಮೊದಲು 3,105), ಚೈತ್ರಾ 3,235 (3,050), ಲಕ್ಷ್ಮೀ 3,150 (2,920) ಕೆಜಿ ತೂಕ ಹೊಂದಿವೆ.

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ
    ಜಂಬೂಸವಾರಿ ಆನೆ ಅಭಿಮನ್ಯು

    ಎರಡನೇ ಗಜಪಡೆ ತಂಡದ ಐದು ಆನೆಗಳ ಪೈಕಿ ಹೊಸ ಆನೆ ಸುಗ್ರೀವ ಹೆಚ್ಚು ತೂಕದವ. ಈತ ಬರೋಬ್ಬರಿ 4785 ಕೆಜಿ ಇದ್ದಾನೆ. ನಂತರದ ಸ್ಥಾನ ಶ್ರೀರಾಮ 4,475. ಪಾರ್ಥಸಾರಥಿ 3,445. ಗೋಪಿ 4,670 ಹಾಗೂ ವಿಜಯ 2,760 ಕೆಜಿ ತೂಕ ಹೊಂದಿದೆ.

    ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು 14 ಆನೆಗಳನ್ನು ತೂಕ ಮಾಡಿದ್ದೇವೆ. ಎರಡನೇ ತಂಡದ ಎಲ್ಲ ಗಂಡಾನೆಗಳೂ 4,000 ದಿಂದ 4,600 ಕೆಜಿ ವರೆಗೂ ಇವೆ. ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ 3,445 ಕೆಜಿ ಇದೆ. ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ತಾಲೀಮುಗಳಿಗೂ ಚೆನ್ನಾಗಿ ಸಹಕರಿಸುತ್ತಿವೆ. ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜತೆ ಸೇರಿ ಗುರುವಾರದಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12ರಿಂದ ಎಲ್ಲ ಆನೆಗಳೂ ತಾಲೀಮಿನಲ್ಲಿ ಭಾಗವಹಿಸಲಿವೆ.
    | ಡಾ.ವಿ. ಕರಿಕಾಳನ್​ ಡಿಸಿಎಫ್​

    ಅನೇಕ ಪ್ರಥಮಗಳ ಒಡತಿ ರಾಣಿ ಎಲಿಜಬೆತ್​! ಇಲ್ಲಿದೆ ಜೀವನಪಥ… ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು

    ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts