'ಪುಷ್ಪಾ-2' ರಶ್ಮಿಕಾ ಮಂದಣ್ಣ ಶೂಟಿಂಗ್​ ಫೋಟೋ ಲೀಕ್..!?

rashmika-mandanna-pushpa-promotion-22
Published on

ಹೈದರಾಬಾದ್​: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪಾ-2 ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದ್ದು, ಈಗಾಗಲೇ ನಟ ಅಲ್ಲು ಅರ್ಜುನ್​ ಲುಕ್​ ರಿವೀಲ್​ ಮಾಡಿರುವ ಚಿತ್ರತಂಡ, ಚಿತ್ರದ ಕುರಿತು ಬೇರೆ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ.

ಈ ನಡುವೆ ಪುಷ್ಪಾ-2 ಚಿತ್ರದಲ್ಲಿ ನಟಿಸುತ್ತಿರುವ ನಟಿ ರಶ್ಮಿಕಾಳ ಶ್ರೀವಲ್ಲಿ ಪಾತ್ರವು ಸಾಯಲಿದೆ ಎಂಬ ಚರ್ಚೆಯು ಜೋರಾಗಿದ್ದು, ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಲೀಕ್ ಆಗಿದೆ. ಈ ಫೋಟೋ ಕುರಿತು ಹಲವಾರು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಇದು ಶೂಟಿಂಗ್​​ ಸಮಯದಲ್ಲಿನ ಲೀಕ್ ಚಿತ್ರ ಎಂದು ಭಾವಿಸಿದ್ದಾರೆ.

pushpa 2 leak photo

ಆದರೆ ವಾಸ್ತವದಲ್ಲಿ, ಈ ಫೋಟೋ ಪುಷ್ಪಾ-2 ಚಿತ್ರದ್ದಲ್ಲ, ಇದರಲ್ಲಿನ ಮಹಿಳೆ ರಶ್ಮಿಕಾ ಮಂದಣ್ಣ ಅಲ್ಲ ಎಂದು ಹೇಳಲಾಗಿದೆ. 2022ರಲ್ಲಿ ಬಿಡುಗಡೆಯಾದ ಮರಾಠಿ ಚಲನಚಿತ್ರ 'ನಯ್ ವರನ್ ಭಟ್ ಲೊಂಚಾ ಕೋನ್ ನಯ್ ಕೊಂಚ' ಚಿತ್ರಕ್ಕೆ ಸಂಬಂಧಿಸಿದ ಫೋಟೋ ಇದಾಗಿದೆ. ನಟಿ ಇಶಾ ದಿವೇಕರ್ ನೋಡಲು ರಶ್ಮಿಕಾ ಮಂದಣ್ಣ ಅವರಂತೆ ಕಾಣುವುದರಿಂದ, ಫ್ಯಾನ್ ಮೇಡ್ ಪೋಸ್ಟರ್​ಗಳು ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net