

ಬೆಂಗಳೂರು: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಚಿತ್ರವು ಡಿಸೆಂಬರ್ 05ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆಯ ಹೊರತಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬಿಡುಗಡೆಯಾದ ದಿನವೇ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿರುವ ಪುಷ್ಪ-2 (Pushpa 2) ಚಿತ್ರವು ದಾಖಲೆಯ ಗಳಿಕೆ ಕಾಣುತ್ತಿದ್ದು, ಸಾವಿರ ಕೋಟಿ ಕ್ಲಬ್ ಸೇರಿದರೂ ಅಚ್ಚರಿ ಇಲ್ಲ ಎಂದು ಬಾಕ್ಸ್ಆಫೀಸ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇನ್ನೂ ಚಿತ್ರಕ್ಕೆ ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದ್ದು, ರಾಜ್ಯದಲ್ಲೂ ದಾಖಲೆಯ ಕಲೆಕ್ಷನ್ ಮಾಡುವ ಮೂಲಕ ಸದ್ದು ಮಾಡಿದೆ. ಈ ಬಗ್ಗೆ ಸಿನಿಮಾ ತಂಡದಿಂದಲೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಿಕ್ಕ ಹೈಪ್ ಹಾಗೂ ಅಪ್ಡೇಟ್ಗಳಿಂದ ಪುಷ್ಪ 2 (Pushpa 2) ಚಿತ್ರವನ್ನು ವೀಕ್ಷಿಸಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದರು. ಪೈರಸಿ ಹಾಗೂ ಮಿಶ್ರ ಪ್ರತಿಕ್ರಿಯೆಯ ಹೊರತಾಗಿ ಚಿತ್ರ ಬಹುತೇಕ ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದಲ್ಲಿ ಪ್ರಮೋಶನ್ ಹೊರತಾಗಿ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕರ್ನಾಟದಲ್ಲಿ ಚಿತ್ರವು ಮೊದಲ ದಿನ 23.7 ಕೋಟಿ ರೂಪಾಯಿ ಗಳಿಸಿದ್ದು, ತೆಲುಗು ವರ್ಷನ್ಗೆ ಜನ ಹೆಚ್ಚು ಮನ್ನಣೆ ಹಾಕಿದ್ದಾರೆ. ತೆಲುಗು ಚಿತ್ರವೊಂದು ಕರ್ನಾಟಕದಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರೋದು ಇದೇ ಮೊದಲು ಎಂದು ಹೇಳಲಾಗಿದ್ದು, ಈ ವಿಚಾರವಾಗಿ ಪುಷ್ಪ 2 ದಾಖಲೆ ಬರೆದಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪುಷ್ಪ-2 ಚಿತ್ರಕ್ಕೆ ಸಾವಿರಾರು ಶೋಗಳನ್ನು ಮೀಸಲಿಡಲಾಗಿದ್ದು, ಟಿಕೆಟ್ ದರ ಹೆಚ್ಚಳ ಕೂಡ ಚಿತ್ರದ ಕೆಲಕ್ಷನ್ ಜಾಸ್ತಿ ಆಗಲು ಕಾರಣ ಎಂದು ಹೇಳಲಾಗಿದೆ. ಟಿಕೆಟ್ ದರ ಹೆಚ್ಚಳದ ಫಲವಾಗಿ ಚಿತ್ರವು ಮೊದಲ ದಿನ 175 ಕೋಟಿ ರೂಪಾಯಿ ಗಳಿಸಿದ್ದು, ವಾರಾಂತ್ಯದ ವೇಳೆ 500ಕೋಟಿ ಕ್ಲಬ್ ಸೇರಬಹುದು ಎಂದು ಬಾಕ್ಸ್ಆಫೀಸ್ ಪಂಡಿತರು ಹೇಳಿದ್ದಾರೆ.