

ಹೈದರಾಬಾದ್: ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಡಿಸೆಂಬರ್ 05ರಂದು ವಿಶ್ವದಾದ್ಯಂತ ತೆರೆ ಕಂಡಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಿಲೀಸ್ ಆದ ಮೊದಲ ದಿನವೇ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದ ಹೊರತಾಗಿಯೂ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಮೊದಲ ದಿನವೇ ದಾಖಲೆ ಬರೆದಿದೆ.
ಇನ್ನೂ ಪುಷ್ಪ 2 (Pushpa 2)ಚಿತ್ರವನ್ನು ನಾಯಕಿ ರಶ್ಮಿಕಾ ವಿಜಯ್ ದೇವರಕೊಂಡ ಕುಟುಂಬಸ್ಥರೊಂದಿಗೆ ವೀಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇವರಿಬ್ಬರು ರಿಲೇಷನ್ಶಿಪ್ನಲ್ಲಿರುವ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ರಶ್ಮಿಕಾ ಮಂದಣ್ನ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarakonda) ಹಲವು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಆಗಿಂದಾಗೆ ಕೇಳಿ ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಕದ್ದು ಮುಚ್ಚಿ ವಿದೇಶದಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿದ್ದವು. ಇದೀಗ ಇವರಿಬ್ಬರು ಓಪನ್ ಆಗಿ ಸುತ್ತಾಟ ನಡೆಸುತ್ತಿದ್ದು, ವಿಜಯ್ ದೇವರಕೊಂಡ ಕುಟುಂಬಸ್ಥರೊಂದಿಗೆ ರಶ್ಮಿಕಾ ಪುಷ್ಪ 2 (Pushpa 2) ಚಿತ್ರವನ್ನು ವೀಕ್ಷಿಸಿರುವುದು.
ರಶ್ಮಿಕಾ ಹೈದರಾಬಾದ್ನ ಎಎಂಬಿ ಸಿನಿಮಾಸ್ನಲ್ಲಿ (ಏಷಿಯನ್ ಮಹೇಶ್ ಬಾಬು) ಚಿತ್ರ ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್ ಅವರು ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ವಿಜಯ್ ದೇವರಕೊಂಡ ಕುಟುಂಬಸ್ಥರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಈ ಫೋಟೋ ವೈರಲ್ ಆದ ಬಳಿಕ ಫ್ಯಾನ್ಸ್ ಸಿಹಿಸುದ್ದಿ ಯಾವಾಗ ಎಂದು ಕೇಳುತ್ತಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ತಮ್ಮ ನಡುವಿನ ಸಂಬಂಧದ ಬಗ್ಗೆ ಇನ್ನಷ್ಟೇ ಖಚಿತಪಡಿಸಬೇಕಿದೆ.