ಆತ ಒಬ್ಬ... ತಮ್ಮನ್ನು ಕೆಣಕಿದ Yashasvi Jaiswal ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಸ್ಟಾರ್ಕ್​

Jaiswal Starc
Published on

ಅಡಿಲೇಡ್​: ಇಲ್ಲಿನ ಅಡಿಲೇಡ್​ ಓವಲ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ  ಆತಿಥೇಯರು ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್​ ನಷ್ಟಕ್ಕೆ 86 ರನ್​ ಗಳಿಸಿದ್ದು, ಮೊದಲ ದಿನದಾಟದ ಗೌರವ ಸಂಪಾದಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ 6) ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ತತ್ತರಿಸಿ 180 ರನ್​ಗಳಿಗೆ ಆಲೌಟ್​ ಆಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ತಂಡವು ನಾಥನ್ ಮೆಕ್‌ಸ್ವೀನಿ (38 ರನ್, 97 ಎಸೆತ, 6 ಬೌಂಡರಿ) ಹಾಗೂ ಅನುಭವಿ ಮಾರ್ನಸ್ ಲಬುಶೇನ್ (20 ರನ್,67 ಎಸೆತ, 3 ಬೌಂಡರಿ) ಜತೆಯಾಟದ ಫಲವಾಗಿ ದಿನದಾಟದ ಅಂತ್ಯಕ್ಕೆ ವಿಕೆಟ್​ ನಷ್ಟಕ್ಕೆ 86 ರನ್​ಗಳಿಸಿದೆ.

ಇನ್ನೂ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್​ (Yashasvi Jaiswal) ತಮ್ಮ ಅಮೋಘ ಪ್ರದರ್ಶನವನ್ನು ಎರಡನೇ ಪಂದ್ಯದಲ್ಲೂ ಮುಂದುವರೆಸಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ. ಮೊದಲ ಎಸೆತದಲ್ಲೇ ವೇಗಿ ಮಿಚೆಲ್​ ಸ್ಟಾರ್ಕ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಯುವ ಆಟಗಾರ (Yashasvi Jaiswal) ಕೊರಳೊಡ್ಡಿದ್ದು, ಈ ಬಗ್ಗೆ ವೇಗಿ ಮಿಚೆಲ್​ ಸ್ಟಾರ್ಕ್​ ಮಾತನಾಡಿದ್ಧಾರೆ.

Starc Jaiswal

ಮೊದಲ ದಿನದಾಟದ ಬಳಿಕ ಮಾತನಾಡಿದ ಸ್ಟಾರ್ಕ್​, ಅದರಲ್ಲಿ ಏನು ವಿಶೇಷವಿಲ್ಲ ಎಂದು ಹೇಳಿದ್ದಾರೆ. ನನ್ನ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ಆರಂಭಿಕ ಹಂತದಲ್ಲೇ ಬ್ಯಾಟಿಂಗ್​ ಲೈನ್​ಅಪ್​ಅನ್ನು ಪ್ರವೇಶ ಮಾಡುವುದು ಅಷ್ಟು ಸುಲಭದ ಮಾತಲ್ಲ. ಈ ವಿಚಾರ ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ. ದೊಡ್ಡ ಸರಣಿಗಳಲ್ಲಿ ಈ ರೀತಿ ಆಡುವುದು ಉತ್ತಮ ಮಾರ್ಗವಾಗಿದೆ. ಟೆಸ್ಟ್​ ಕ್ರಿಕೆಟ್​ನ ಸ್ವರೂಪ ಬದಲಾಗಿದ್ದು, ಹಲವರು ಇದನ್ನು ಟಿ20 ರೀತಿಯಲ್ಲಿ ಆಡುತ್ತಾರೆ. ಕೆಲವರು ಐಪಿಎಲ್​ನಂತಹ ಟೂರ್ನಿಗಳಲ್ಲಿ ಗುರುತಿಸಿಕೊಂಡು ಮುನ್ನೆಲೆಗೆ ಬರುತ್ತಾರೆ. ಇವರಲ್ಲಿ ನಾನು ಯಾವುದೇ ಭಯವನ್ನು ಕಂಡಿಲ್ಲ.

ಜೈಸ್ವಾಲ್​ (Yashasvi Jaiswal) ಹಾಗೂ ನಿತೀಶ್​ ರೆಡ್ಡಿ ಆಟವನ್ನು ನಾವು ಗಮನಿಸಿದ್ದೇವೆ. ಅವರ ಕೆಲ ಹೊಡೆತಗಳು ತುಂಬಾ ವಿಶೇಷವಾಗಿದ್ದವು. ಯಾವುದೇ ಮಾದರಿಯ ಕ್ರಿಕೆಟ್​ ಆಗಿರಲಿ ಮುಂಬರುವ ಪೀಳಿಗೆಯಿಂದ ನಾವು ಬದಲಾವಣೆಯನ್ನು ನೋಡುತ್ತೇವೆ. ಯಶಸ್ವಿ ಜೈಸ್ವಾಲ್​ ಒಬ್ಬ ಫಿಯರ್​ಲೆಸ್​ ಕ್ರಿಕೆಟಿಗ. ಮೊದಲ ಪಂದ್ಯದಲ್ಲಿ ಆತ ಏನು ಹೇಳಿದ್ದ ಎಂಬುದನ್ನು ನಾನು ಕೇಳಿಸಿಕೊಂಡಿರಲಿಲ್ಲ ಎಂದು ವೇಗಿ ಮಿಚೆಲ್​ ಸ್ಟಾರ್ಕ್​ ಮೊದಲ ದಿನದಾಟದ ಬಳಿಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net