Pushpa 2 : ಬರೋಬ್ಬರಿ 3 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಥಿಯೇಟರ್‌ಗಳಲ್ಲಿ ಬಹುನಿರೀಕ್ಷಿತ ಪುಷ್ಪ-2 ಸಿನಿಮಾ ಸಂಭ್ರಮಾಚರಣೆ ಶುರುವಾಗಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಭಾಷೆಯ ಬೇಧವಿಲ್ಲದೆ ಟಿಕೆಟ್ ಬುಕ್ಕಿಂಗ್ನಲ್ಲಿ ಪುಷ್ಪ ಹೊಸ ದಾಖಲೆ ಬರೆಯುತ್ತಿದೆ.
ಆದರೆ, ಪುಷ್ಪ-2 ಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ಚಿತ್ರವು 3ಡಿ ಆವೃತ್ತಿಯಲ್ಲಿ ಲಭ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಖ್ಯಾತ ಸಿನಿಮಾ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಬಿಡುಗಡೆಯ ದಿನದಂದು ಎಲ್ಲ ಥಿಯೇಟರ್‌ಗಳಲ್ಲಿ 2D ಆವೃತ್ತಿಯನ್ನು ಮಾತ್ರ ಲಭ್ಯಗೊಳಿಸಲಾಗುತ್ತಿದೆ. ನೀವು ಈಗಾಗಲೇ 3ಡಿ ಆವೃತ್ತಿಯ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ ಆ ಶೋಗಳನ್ನು 2ಡಿ ಆವೃತ್ತಿಯಲ್ಲಿ ತೋರಿಸುವ ಸಾಧ್ಯತೆ ಇದೆಯಂತೆ. 3D ಆವೃತ್ತಿಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಈ ಕುರಿತು ಚಿತ್ರತಂಡದಿಂದ ಸ್ಪಷ್ಟತೆ ಬರಬೇಕು ಎಂದು ಹೇಳಿದ್ದಾರೆ.
#BreakingNews… ‘PUSHPA 2’ *3D VERSION* NOT RELEASING THIS WEEK… The *3D version* of #Pushpa2 will not release this Thursday [5 Dec 2024]… The *2D version* will arrive as scheduled on 5 Dec 2024.
Additionally, there will be *no midnight shows* for the #Hindi version of… pic.twitter.com/AJn5T2LRtT
— taran adarsh (@taran_adarsh) December 3, 2024
ಈ ನಡುವೆ ಸುಕುಮಾರ್-ಅಲ್ಲು ಅರ್ಜುನ್ ಕಾಂಬೋದಲ್ಲಿ ಬರುತ್ತಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ, ಐಮ್ಯಾಕ್ಸ್, ಡಾಲ್ಬಿ, ಡಿಬಾಕ್ಸ್, 4ಡಿಎಕ್ಸ್ನಲ್ಲಿ 2ಡಿ, 3ಡಿಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಇದು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಲಭ್ಯವಿರುತ್ತದೆ. ತಯಾರಕರು ಈಗಾಗಲೇ 2D ಆವೃತ್ತಿಯ ಮುದ್ರಣವನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಫೆಂಗಲ್ ಮಳೆಗೆ ಕಂಗಾಲು; ಚಂಡಿಗೆ ರಾಜ್ಯ ತತ್ತರ, ಬೆಳೆ-ತರಕಾರಿ ನಾಶಕ್ಕೆ ರೈತರ ಕಣ್ಣೀರು
ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೇ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಯಶಸ್ಸಿನಿಂದಾಗಿ ಈ ಸಿನಿಮಾ ಭಾರಿ ಕ್ರೇಜ್ ಹುಟ್ಟುಹಾಕಿದೆ. (ಏಜೆನ್ಸೀಸ್)
ನಾನು ಆ ಒಂದು ಭಾಷೆಯಲ್ಲಿ ಮಾತ್ರ ಸಿನಿಮಾ ಮಾಡಲ್ಲ! ಅಲ್ಲು ಅರ್ಜುನ್ ಸೆನ್ಸೇಷನಲ್ ಕಾಮೆಂಟ್ ವೈರಲ್ | Allu Arjun