ನಾನು ಆ ಒಂದು ಭಾಷೆಯಲ್ಲಿ ಮಾತ್ರ ಸಿನಿಮಾ ಮಾಡಲ್ಲ! ಅಲ್ಲು ಅರ್ಜುನ್ ಸೆನ್ಸೇಷನಲ್ ಕಾಮೆಂಟ್​ ವೈರಲ್​ | Allu Arjun

Allu Arjun
Published on

Allu Arjun : ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಬಹುನಿರೀಕ್ಷಿತ ಪುಷ್ಪ-2 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಡಿಸೆಂಬರ್ 5ರಂದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದೆ.

ಪುಷ್ಪ ಸಿನಿಮಾದ ಪ್ರಚಾರದ ಭಾಗವಾಗಿ ಇತ್ತೀಚೆಗಷ್ಟೇ ಪುಷ್ಪ ಚಿತ್ರತಂಡ ಮುಂಬೈಗೆ ಭೇಟಿ ನೀಡಿತ್ತು. ಈ ವೇಳೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರೊಂದಿಗಿನ ತಮ್ಮ ದೀರ್ಘಕಾಲದ ಸ್ನೇಹದ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದರು.

ನಾವಿಬ್ಬರೂ ಚೆನ್ನೈನಿಂದ ಬಂದಿದ್ದೇವೆ. ನನಗೆ ಹಿಂದಿ ಸಿನಿಮಾ ಮಾಡುವುದು ತುಂಬಾ ಕಷ್ಟ ಅಂತ ದೇವಿಶ್ರೀ ಬಳಿ ಹೇಳುತ್ತಿದ್ದೆ, ಆದರೆ ಸಂಗೀತ ನಿರ್ದೇಶಕನಾಗಿ ದೇವಿಶ್ರೀ ಅವರಿಗೆ ಹಿಂದಿ ಸಿನಿಮಾ ಮಾಡುವುದು ಸುಲಭ. ಆದರೆ, ನೀವೇಕೆ ಮಾಡುವುದಿಲ್ಲ ಎಂದು ಕೇಳುತ್ತಿದ್ದೆ. ಅದಕ್ಕೆ ಅವರು ಇಲ್ಲ ಎನ್ನುತ್ತಿದ್ದರು. ಅಲ್ಲದೆ, ನಾನು ಕೂಡ ಹಿಂದಿ ಸಿನಿಮಾ ಮಾಡುತ್ತೇನೆ ನನ್ನೊಂದಿಗೆ ನೀವೇಕೆ ಹಿಂದಿ ಸಿನಿಮಾ ಮಾಡಬಾರದು ಎಂದು ಕೇಳುತ್ತಿದ್ದರು. ಆದರೆ, ನಾನು ಹಿಂದಿ ಭಾಷೆಯಲ್ಲಿ ಮಾತ್ರ ಸಿನಿಮಾ ಮಾಡುವುದಿಲ್ಲ ಎಂದು ಹೇಳುತ್ತಿದ್ದೆ. ಏಕೆಂದರೆ, ಆ ಸಮಯದಲ್ಲಿ ಹಿಂದಿ ಸಿನಿಮಾ ಮಾಡುವುದು ತುಂಬಾ ಕಷ್ಟವಾಗಿತ್ತು ಎಂದರು.

ತಮ್ಮ ನಿಲುವನ್ನು ವಿವರಿಸಿದ ಅಲ್ಲು ಅರ್ಜುನ್, ಹಿಂದಿ ಚಿತ್ರ ಮಾಡುವುದು ತುಂಬಾ ದೊಡ್ಡ ವಿಷಯ. ಬಹುಶಃ ನಮ್ಮ ಜೀವಿತಾವಧಿಯಲ್ಲಿ ಒಂದೋ ಅಥವಾ ಎರಡೋ ಹಿಂದಿ ಚಿತ್ರಗಳನ್ನು ಮಾಡಬಹುದು. ಹಿಂದಿ ಸಿನಿಮಾ ಮಾಡುವುದು ನಮಗೆ ದೂರದ ಮಾತಾಗಿತ್ತು. ಆ ಮನಸ್ಥಿತಿಯಿಂದಲೇ ಈ ಹಂತಕ್ಕೆ ಬಂದು ಇಲ್ಲಿ ನಿಲ್ಲುವುದು ನನಗೆ ಬಹಳ ದೊಡ್ಡ ವಿಷಯವಾಗಿದೆ. ನಾವಿಬ್ಬರೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಒಂದೇ ಚಿತ್ರಕ್ಕೆ ರಾಷ್ಟ್ರೀಯ ಸೂಪರ್‌ಹಿಟ್ ಆಲ್ಬಂ ನೀಡಿದ್ದೇವೆ. ಇದು ನಮಗೆ ಸಂಭವಿಸಿದ ಅತ್ಯಂತ ಅಮೂಲ್ಯವಾದ ಸಂಗತಿಯಾಗಿದೆ ಎಂದು ಅಲ್ಲು ಅರ್ಜುನ್​, ದೇವಿಶ್ರೀ ಜತೆಗಿನ ತಮ್ಮ ಪ್ರಯಾಣದ ಬಗ್ಗೆ ಮತ್ತು ಸಾಧನೆಯನ್ನು ನೆನಪಿಸಿಕೊಂಡರು.

ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೇ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಯಶಸ್ಸಿನಿಂದಾಗಿ ಈ ಸಿನಿಮಾ ಭಾರಿ ಕ್ರೇಜ್​ ಹುಟ್ಟುಹಾಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net