ಕಂಗನಾ ರಣಾವತ್​ಗೆ ಕಪಾಳಮೋಕ್ಷ; ಪಂಜಾಬ್​ ಸಿಎಂ ಭಗವಂತ್​ ಮಾನ್​ ಹೇಳಿದ್ದೇನು?

1 Min Read
ಕಂಗನಾ ರಣಾವತ್​ಗೆ ಕಪಾಳಮೋಕ್ಷ; ಪಂಜಾಬ್​ ಸಿಎಂ ಭಗವಂತ್​ ಮಾನ್​ ಹೇಳಿದ್ದೇನು?

ಚಂಡೀಗಢ: ನಟಿ ಕಂಗನಾ ರಣಾವತ್​​ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿದ ಕೆಲವು ದಿನಗಳ ನಂತರ ಘಟನೆ ಬಗ್ಗೆ ಪಂಜಾಬ್​​ ಮುಖ್ಯಮಂತ್ರಿ ಭಗವಂತ್​ ಮಾನ್​ ಮೌನಮುರಿದಿದ್ದಾರೆ.

ಇದನ್ನು ಓದಿ: ಕೊನೆಗೂ ಪಾಕ್​ನಿಂದ ಬಂತು ಶುಭಹಾರೈಕೆ ಸಂದೇಶ; ಪ್ರಧಾನಿ ಮೋದಿಗೆ ಅಭಿನಂದಿಸಿದ ಶಹಬಾಜ್ ಷರೀಫ್

ಮಾನತುಗೊಂಡಿರುವ ಸಿಬ್ಬಂದಿ ಕುಲ್ವಿಂದರ್ ಕೌರ್​​​ ರೈತರ ಆಂದೋಲನದ ಕುರಿತು ಕಂಗನಾ ನೀಡಿದ ಹೇಳಿಕೆಗಳನ್ನು ತೋರಿಸಿದ್ದಾರೆ. ಪ್ರತಿಭಟನೆಯಲ್ಲಿ ಅವರ (ಕುಲವಿಂದರ್) ತಾಯಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ. ಕಂಗನಾ ಅವರ ಹೇಳಿಕೆಯಿಂದ ಕೋಪಗೊಂಡ ಸಿಬ್ಬಂದಿ ಹಾಗೇ ನಡೆದುಕೊಂಡಿದ್ದಾರೆ. ಆದರೂ ಸಂಭವಿಸಿದ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ.

ಅಲ್ಲದೆ ಘಟನೆ ಬಳಿಕ ಕಂಗನಾ ರಣಾವತ್​ ಪಂಜಾಬ್‌ನಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ಹೇಳಿದ್ದಾರೆ. ಅವರು ಸಾರ್ವಜನಿಕ ವ್ಯಕ್ತಿಯಾಗಿದ್ದರೂ, ಚಲನಚಿತ್ರ ನಟಿಯಾಗಿ, ಪ್ರಸ್ತುತ ಸಂಸದರಾಗಿ ಈ ರೀತಿ ಹೇಳುವುದು ತಪ್ಪು ಎಂದು ಭಗವಂತ್​ ಮಾನ್​​ ಹೇಳಿದ್ದಾರೆ.

ಪಂಜಾಬ್‌ನಲ್ಲಿ ರೈತ ಸಂಘಗಳು ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸಿ ಮೆರವಣಿಗೆಯನ್ನು ಕೈಗೊಂಡಿವೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಜೂನ್ 6 ರಂದು ಈ ಘಟನೆ ನಡೆದಿದೆ. ತನ್ನ ಮೊದಲ ಚುನಾವಣೆಯಲ್ಲಿ ತವರು ರಾಜ್ಯವಾದ ಹಿಮಾಚಲ ಪ್ರದೇಶದ ಮಂಡಿಯಿಂದ ಗೆದ್ದಿರುವ ಕಂಗನಾ ರಣಾವತ್​ ಬಿಜೆಪಿ ನೇತೃತ್ವದ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಹೋಗಬೇಕಿತ್ತು. (ಏಜೆನ್ಸೀಸ್​)

ಅಕ್ಷಯ್​ ಕುಮಾರ್​​​​ ಹೆಸರಿನಲ್ಲಿ ವಂಚಿಸಿದ್ದ ನಟಿ ವಿರುದ್ಧ ದೂರು ದಾಖಲು; ಯಾರು ಆ ನಟಿ.. ಏನಿದು ಪ್ರಕರಣ? ಇಲ್ಲಿದೆ ಫುಲ್​ ಡಿಟೇಲ್ಸ್​​

See also  ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ; ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ...
Share This Article