More

  ಕೊನೆಗೂ ಪಾಕ್​ನಿಂದ ಬಂತು ಶುಭಹಾರೈಕೆ ಸಂದೇಶ; ಪ್ರಧಾನಿ ಮೋದಿಗೆ ಅಭಿನಂದಿಸಿದ ಶಹಬಾಜ್ ಷರೀಫ್

  ನವದಹಲಿ: ಇಡೀ ಸಚಿವ ಸಂಪುಟದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಜೂನ್​ 9) ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭೆ ಚುನಾವಣೆ ಫಲಿತಾಂಶ ಜೂನ್ 4ರಂದು ಪ್ರಕಟವಾದಾಗಿನಿಂದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಗೆಲುವಿಗೆ ದೇಶ ಮತ್ತು ವಿಶ್ವದ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

  ಇದನ್ನು ಓದಿ: ಅಕ್ಷಯ್​ ಕುಮಾರ್​​​​ ಹೆಸರಿನಲ್ಲಿ ವಂಚಿಸಿದ್ದ ನಟಿ ವಿರುದ್ಧ ದೂರು ದಾಖಲು; ಯಾರು ಆ ನಟಿ.. ಏನಿದು ಪ್ರಕರಣ? ಇಲ್ಲಿದೆ ಫುಲ್​ ಡಿಟೇಲ್ಸ್​​

  ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸೋಮವಾರದಂದು (ಜೂನ್​ 10) ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ತಮ್ಮ ಎಕ್ಸ್​​​​ ಪೋಸ್ಟ್​​​ನಲ್ಲಿ ಶುಭಹಾರೈಸಿದ್ದಾರೆ.
  ನವದೆಹಲಿಯಲ್ಲಿ ನಡೆದ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ನೆರೆಯ ರಾಷ್ಟ್ರದಿಂದ ಆಹ್ವಾನಿತರಾಗದ ಏಕೈಕ ಪ್ರಧಾನಿ ಶಹಬಾಜ್ ಷರೀಫ್. ಚೀನಾದಿಂದ ವಾಪಸಾದ ಬಳಿಕ ಪ್ರಧಾನಿ ಮೋದಿಯವರಿಗೆ ಶುಭ ಹಾರೈಸಿದ್ದಾರೆ.

  ಇತರ ದೇಶಗಳಿಂದ ಕಳುಹಿಸಿರುವ ಅಭಿನಂದನಾ ಸಂದೇಶಗಳು ಸಾಕಷ್ಟು ಸುದೀರ್ಘವಾಗಿದ್ದು, ಹೆಚ್ಚಿನ ದೇಶಗಳು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ಬಗ್ಗೆ ಮಾತನಾಡಿವೆ, ಆದರೆ ಪಾಕಿಸ್ತಾನದಿಂದ ಅಭಿನಂದನೆಗಳನ್ನು ಹೊರತುಪಡಿಸಿ ಬೇರೇನೂ ಬಂದಿಲ್ಲ. (ಏಜೆನ್ಸೀಸ್​​)

  ಮೋದಿ ನಾಯಕತ್ವದಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿ ಕಂಡಿದೆ: ಭೂತಾನ್​​ ಪ್ರಧಾನಿ ತೊಬ್ಗೇ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts