ಹೆಂಡತಿ-ಮಗನಿಗೆ ಗುಂಡಿಕ್ಕಿ, ಆತ್ಮಹತ್ಯೆ ಮಾಡಿಕೊಂಡ ಗಂಡ! ಸುಖ ಸಂಸಾರ ಅಂತ್ಯವಾಗಿದ್ದಕ್ಕೆ ಕಾರಣವೇನು?

punjab
Published on

ಅಮೃತಸರ: ಏಳೇಳು ಜನ್ಮಕ್ಕೂ ಜತೆಯಾಗಿರುವುದಾಗಿ ಪ್ರಮಾಣ ಮಾಡಿ ಮದುವೆಯಾಗಿದ್ದ ಧರ್ಮಪತ್ನಿ ಹಾಗೂ ಮುದ್ದಿನ ಮಗನನ್ನು ಗಂಡನೇ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ. ಘಟನೆಗೆ ಕಾರಣವೇನು ಎನ್ನುವುದರ ಕುರಿತಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಮೃತಸರದ ಗುರು ತೇಘ್​ ಬಹದೂರ್​ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ವಿಕ್ರಮ್​ಜೀತ್​ ಹೆಸರಿನ ವ್ಯಕ್ತಿ ಹೆಂಡತಿ ಮತ್ತು ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ್ದಾನೆ. ವಿಕ್ರಮ್​ಜೀತ್​ ಒಬ್ಬ ಫೈನ್ಸಾನ್ಶಿಯರ್​ ಆಗಿದ್ದು, ಮಾರ್ಕೆಟ್​ನಲ್ಲಿ ಸಾಕಷ್ಟು ದುಡ್ಡು ಹಾಕಿದ್ದನಂತೆ. ಅದರಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲೇ ಆತ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ.

ಸಾಯುವುದಕ್ಕೂ ಮೊದಲು ಆತ ಒಂದು ವಿಡಿಯೋ ಮಾಡಿಟ್ಟಿದ್ದಾನೆ. ನನ್ನ ಸ್ನೇಹಿತನ ಗನ್​ ತೆಗೆದುಕೊಂಡು ಬಂದು ಅದರಲ್ಲಿ ನನ್ನ ಹೆಂಡತಿ ಮತ್ತು ಮಗನನ್ನು ಕೊಲೆ ಮಾಡಿದ್ದೇನೆ. ಈಗ ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸ್ನೇಹಿತನಿಗೆ ಸುಳ್ಳು ಹೇಳಿ ಗನ್​ ಪಡೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾನೆ. ಪೊಲೀಸರು ಈ ವಿಚಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ನಿಖರ ಕಾರಣವನ್ನು ಹುಡುಕುತ್ತಿದ್ದಾರೆ. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net