

Puneeth Rajkumar : ಚಾಮರಾಜನಗರ ಜಿಲ್ಲೆ ಸಮೀಪದಲ್ಲೇ ಇರುವ ತಮಿಳುನಾಡಿನ ಗಾಜನೂರಿನಲ್ಲಿ ವಾಸವಿದ್ದ ವರನಟ ಡಾ.ರಾಜ್‌ಕುಮಾರ್ ಸಹೋದರಿ ನಾಗಮ್ಮ(95) ಶುಕ್ರವಾರ ಬೆಳಗ್ಗೆ ನಿಧನರಾದರು.
ವಯಸ್ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಮ್ಮಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಘಾತಕಾರಿ ವಿಚಾರ ತಿಳಿಸಬಾರದೆಂದು ಪುನೀತ್ ರಾಜ್‌ಕುಮಾರ್ ಮೃತಪಟ್ಟ ವಿಷಯನ್ನು ನಾಗಮ್ಮಗೆ ಹೇಳದೆ ಗೌಪ್ಯವಾಗಿ ಇಡಲಾಗಿತ್ತು.
ಅಪ್ಪು ಬದುಕಿದ್ದಾರೆಂದು ಭಾವಿಸಿದ್ದ ಅತ್ತೆ ನಾಗಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿ ಮನೆಗೆ ಬಾ ನೋಡಬೇಕು ಎಂದಿದ್ದವರು ಶುಕ್ರವಾರ ನಿಧನರಾದರು. ಶನಿವಾರ ಗಾಜನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.