'ಅಪ್ಪು' ಕನಸನ್ನು ನನಸು ಮಾಡಲು ಹೊರಟ ಪತ್ನಿ ಅಶ್ವಿನಿ: ಪಿಆರ್‌ಕೆಯಿಂದ ಮಹತ್ವದ ಘೋಷಣೆ!

01-1448973567-puneeth-rajkumar-and-ashwini-wedding-pictures-dodmane-huduga-and-chakravyuha-4
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರು ಅನೇಕ ಕನಸುಗಳನ್ನು ಕಂಡಿದ್ದರು. ಅದೆಲ್ಲವೂ ಪೂರ್ಣಗೊಳ್ಳುವ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದರು. ಈಗ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂದಾಗಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಸೇರಿ ಎಲ್ಲ ಉದ್ಯಮಗಳನ್ನು ಅವರೇ ನೋಡಿಕೊಳ್ಳಬೇಕಿದೆ. ಈಗ ಅಶ್ವಿನಿ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್​ ಸಖತ್​ ಖುಷಿಯಾಗಿದ್ದಾರೆ.  

ಈ ವಿಚಾರದ ಕುರಿತು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್​ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net