

ಉತ್ತರಕನ್ನಡ: 12 ವರ್ಷದಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಲು ತುಂಬಾ ಆಸೆಗಣ್ಣಿನಿಂದ ಕಾಯುತ್ತಿದ್ದ ವೃದ್ಧೆಯೊಬ್ಬರ ಆಸೆ ಕೊನೆಗೂ ಈಡೇರಿದೆ.
ಜೋಯಿಡಾದ ಬಾಳೆಗೌಡ ನಾಯ್ಕ ಮತ್ತು ಇವರ ಪತ್ನಿ ಕರಿಯವ್ವ ಇಬ್ಬರೂ ಡಾ.ರಾಜ್ ಕುಮಾರ್ರ ಅಭಿಮಾನಿಗಳು. ಬಾಳೆಗೌಡ ನಾಯ್ಕ ಅವರು ಡಾ.ರಾಜ್ ಕುಮಾರ್ ಜತೆ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.