VIDEO | ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್‌ಗೆ ಮನೀಷ್ ಪಾಂಡೆ ದಿಟ್ಟ ಉತ್ತರ!

kohli manish web
Published on

ಬೆಂಗಳೂರು: ವಿರಾಟ್ ಕೊಹ್ಲಿ ಮೈದಾನದಲ್ಲಿ ಅತ್ಯಂತ ಆಕ್ರಮಣಕಾರಿ ವರ್ತನೆಗೆ ಹೆಸರಾದವರು. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಫೀಲ್ಡಿಂಗ್ ವೇಳೆ ಸ್ಲೆಡ್ಜಿಂಗ್ ಮೂಲಕವೂ ಆಕ್ರಮಣಕಾರಿ ವರ್ತಿಸುತ್ತಾರೆ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಅವರ ಈ ಆಕ್ರಮಣಕಾರಿ ವರ್ತನೆಯೇ ಅವರಿಗೆ ಮುಳುವಾಗುತ್ತ ಬಂದಿದೆ. ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅವರನ್ನು ದಿಟ್ಟಿಸಿ ನೋಡಿದ್ದಕ್ಕೆ ಪ್ರತಿಯಾಗಿ ಅವರಿಂದ ಗೆಲುವಿನ ಆಟದ ತಿರುಗೇಟು ಎದುರಿಸಿದ್ದ ವಿರಾಟ್ ಕೊಹ್ಲಿ, ಇದೀಗ ಸನ್‌ರೈಸರ್ಸ್‌ ತಂಡದಲ್ಲಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರಿಂದಲೂ ಎಲಿಮಿನೇಟರ್ ಪಂದ್ಯದಲ್ಲಿ ತಿರುಗೇಟು ಎದುರಿಸಿದ್ದಾರೆ.

ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿರುವ ಮತ್ತು ಅದಕ್ಕೆ ಮನೀಷ್ ಪಾಂಡೆ ದಿಟ್ಟ ಉತ್ತರ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿ ಯಾಕೆ ಈ ರೀತಿ ಭಾರತೀಯ ಆಟಗಾರರ ಮೇಲೆಯೇ ಸ್ಲೆಡ್ಜಿಂಗ್ ಮಾಡುತ್ತಿದ್ದಾರೆ ಎಂದು ಕೆಲ ಕ್ರಿಕೆಟ್ ಪ್ರೇಮಿಗಳು ಕೊಹ್ಲಿ ವರ್ತನೆಯ ಬಗ್ಗೆ ಆಕ್ಷೇಪವನ್ನೂ ಎತ್ತಿದ್ದಾರೆ.

ಎಲಿಮಿನೇಟರ್ ಪಂದ್ಯದಲ್ಲಿ ಮೊಹಮದ್ ಸಿರಾಜ್ ಎಸೆದ ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಮನೀಷ್ ಪಾಂಡೆ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ವಿರಾಟ್ ಕೊಹ್ಲಿ, ‘ಆಜ್ ನಹೀ ಮಾರ್ ರಹೇ ಶಾಟ್ಸ್’ (ಅವರು ಇಂದು ಯಾವುದೇ ಹೊಡೆತಗಳನ್ನು ಬಾರಿಸುತ್ತಿಲ್ಲ) ಎಂದು ಜೋರಾಗಿ ಮನೀಷ್ ವಿರುದ್ಧ ಸ್ಲೆಡ್ಜಿಂಗ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಮನೀಷ್ ಪಾಂಡೆ 1 ಎಸೆತದ ನಂತರ ಸಿರಾಜ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್‌ನತ್ತ ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಆಗ ಕೊಹ್ಲಿ ಸಪ್ಪೆ ಮೋರೆ ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net