ಹೆಚ್ಚುತ್ತಿರುವ ಕರೊನಾ: ಪುಣೆಯಲ್ಲಿ ಒಂದು ವಾರ ಕರ್ಫ್ಯೂ ಜಾರಿ, ಕರ್ನಾಟಕದಲ್ಲೂ ಆತಂಕ

Curfew
Published on

ಪುಣೆ: ಕರೊನಾವೈರಸ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಳೆಯಿಂದ ಸಂಜೆ 6 ರಿಂದ ಬೆಳಿಗ್ಗೆ 6ರವರೆಗೆ ​ ಕರ್ಫ್ಯೂ ವಿಧಿಸಲಾಗಿದೆ. ಈ ವೇಳೆ ಹೋಮ್​ ಡೆಲಿವರಿ, ಮೆಡಿಕಲ್ ಸೇವೆಗಳಿಗೆ ಹಾಗೂ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇದಲ್ಲದೇ ಒಂದು ವಾರ ಪುಣೆಯಲ್ಲಿ ಧಾರ್ಮಿಕ ಕೇಂದ್ರಗಳು, ಹೋಟೆಲ್, ಬಾರ್, ರೆಸ್ಟೋರಂಟ್​ಗಳು, ಮಾಲ್, ಸಿನಿಮಾ ಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿದೆ. ನಿನ್ನೆ ಒಂದೇ ದಿನ ಪುಣೆಯಲ್ಲಿ 8012 ಹೊಸ ಕರೊನಾವೈರಸ್ ಸೋಂಕಿತರು ಕಂಡು ಬಂದಿದ್ದಾರೆ.

ಪುಣೆಯಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಅಲ್ಲದೇ ಪುಣೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ತಮ್ಮಲ್ಲಿ ಲಭ್ಯವಿರುವ ಹಾಸಿಗೆಗಳಲ್ಲಿ ಶೇ 80 ರಷ್ಟು ಮೀಸಲಿಡಬೇಕು ಎಂದು ಪುಣೆ ಮಹಾನಗರ ಪಾಲಿಕೆ ಮೇಯರ್ ಮುರುಳಿಧರ್ ಮಹೋಲ್ ಆದೇಶಿಸಿದ್ದಾರೆ. ಮುಂಬೈನಲ್ಲೂ ಕೂಡ ಇದೇ ಪರಿಸ್ಥಿತಿ ಇದೆ. ಆದರೆ ಅಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ.

ಇನ್ನೊಂದೆಡೆ ಕರ್ನಾಟಕದಲ್ಲೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುರಿಂದ ಬೆಂಗಳೂರಿನಲ್ಲಿ ಪುಣೆ ಮಾದರಿಯಲ್ಲಿ ನೈಟ್​ ಕರ್ಫ್ಯೂ ಜಾರಿಗೊಳಿಸಲು ಚಿಂತಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net