More

    ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರವಾಸ ರದ್ದು; ಕಾರಣ ಏನು ಗೊತ್ತೆ ?

    ನವದೆಹಲಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್​ ವಾಡ್ರಗೆ ಕರೊನಾ ಸೋಂಕು ದೃಢಪಟ್ಟಿದ್ದು, ಪತಿಯಂತೆ ತಾವೂ ಸೆಲ್ಫ್ ಐಸೊಲೇಷನ್​ನಲ್ಲಿರುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಸಾಂ, ತಮಿಳುನಾಡು ಮತ್ತು ಕೇರಳಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಳಬೇಕಿದ್ದ ಪ್ರಿಯಾಂಕಾ, ತಮ್ಮ ಪ್ರವಾಸವನ್ನು ರದ್ದು ಮಾಡಿದ್ದಾರೆ.

    ವಾಣಿಜ್ಯೋದ್ಯಮಿಯಾದ ವಾಡ್ರ ಅವರು, ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದ್ದರೂ, ತಾವು ಈವರೆಗೆ ಏಸಿಂಪ್ಟೊಮಾಟಿಕ್ ಆಗಿರುವುದಾಗಿ ಫೇಸ್​ಬುಕ್​ನಲ್ಲಿ ತಿಳಿಸಿದ್ದಾರೆ. ಪ್ರಿಯಾಂಕಾ ಅವರು ಈ ಬಗ್ಗೆ ಟ್ವಿಟರ್​ನಲ್ಲಿ ವೀಡಿಯೋ ಸಂದೇಶ ಪೋಸ್ಟ್ ಮಾಡಿದ್ದಾರೆ. ನಿನ್ನೆ ತಮ್ಮ ಕರೊನಾ ಪರೀಕ್ಷಾ ಫಲಿತಾಂಶ ನೆಗೆಟೀವ್ ಬಂದಿದೆ. ಆದಾಗ್ಯೂ ವೈದ್ಯರ ಸಲಹೆಯ ಮೇರೆಗೆ ಕೆಲವು ದಿನಗಳು ತಮ್ಮ ದೆಹಲಿ ನಿವಾಸದಲ್ಲಿ ಸೆಲ್ಫ್​ ಐಸೊಲೇಟ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

     

    “ಇಂದು ಅಸ್ಸಾಂಗೆ, ನಾಳೆ ತಮಿಳುನಾಡಿಗೆ ಮತ್ತು ಭಾನುವಾರ ಕೇರಳಕ್ಕೆ ಪ್ರಯಾಣ ಮಾಡಿ ಕಾಂಗ್ರೆಸ್ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಯೋಜನೆಯಿತ್ತು. ಆದರೆ ಕರೊನಾಗೆ ಎಕ್ಸ್​ಪೋಸ್​ ಆಗಿರುವ ಕಾರಣದಿಂದಾಗಿ ನಾನು ಅಲ್ಲಿಗೆ ಬರಲು ಆಗುತ್ತಿಲ್ಲ” ಎಂದು ಪ್ರಿಯಾಂಕಾ ಕ್ಷಮೆ ಕೋರಿದ್ದಾರೆ. ಜೊತೆಗೆ, “ನಾನು ಕ್ಯಾಂಪೇನ್ ಮಾಡಬೇಕಿದ್ದ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಹಾಗೂ ಕಾಂಗ್ರೆಸ್ ಜಯಶೀಲವಾಗಲಿ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ದಾವೂದ್ ಭಂಟ ದಾನಿಶ್​ ಚಿಕ್ನಾ ಬಂಧನ

    ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ

    ಕರೊನಾ ಕಟ್ಟೆಚ್ಚರದಲ್ಲಿ ಕುಂಭ ಮೇಳ : ಹರಿದ್ವಾರದಲ್ಲಿ ಇಂದಿನಿಂದ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts