

ಕೋಟ: ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ದಿ.ಪುಂಡಲಿಕ ಹಾಲಂಬಿಯವರ ನೆನಪಿಗಾಗಿ ಅವರ ಪತ್ನಿ ಸರೋಜಾ ಹಾಲಂಬಿ ಸ್ಥಾಪಿಸಿದ ಪುಂಡಲಿಕ ಹಾಲಂಬಿ ಯಕ್ಷ ಪುರಸ್ಕಾರಕ್ಕೆ ಕಲಾವಿದ ಐರೋಡಿ ಗೋವಿಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಸೆ.15ರಂದು ಸಂಜೆ 4.30ಕ್ಕೆ ಗುಂಡ್ಮಿ ಯಕ್ಷ ಕಲಾರಂಗದಲ್ಲಿ ವಿತರಿಸಲಾಗುವುದೆಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.