ಕುಂದಾಪುರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸೆ.15ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ಕುಂದಾಪುರ ತಾಪಂ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಬೈಂದೂರು ಶಿರೂರು ಟೋಲ್‌ಗೇಟ್‌ನಿಂದ ಹೆಜಮಾಡಿ ಟೋಲ್‌ಗೇಟ್‌ವರೆಗೆ ಉಡುಪಿ ಜಿಲ್ಲೆ, ಹೆಜಮಾಡಿಯಿಂದ ಸುಳ್ಯ ಸಂಪಾಜೆವರೆಗೆ ದ.ಕ.ಜಿಲ್ಲೆಯಲ್ಲಿ ಮಾನವ ಸರಪಳಿ ನಡೆಯಲಿದೆ. ಬೆಳಗ್ಗೆ 8ರಿಂದ ಮಾನವ ಸರಪಳಿ ಸಿದ್ಧತೆ, 9ಕ್ಕೆ ಮಾನವ ಸರಪಳಿ ರಚನೆ, 9.15ರವರೆಗೆ ಛಾಯಚಿತ್ರ ತೆಗೆಯುವುದು, 9.15ಕ್ಕೆ ಸಂವಿಧಾನ ಪೀಠಿಕೆ ವಾಚನ, 9.30ಕ್ಕೆ ಜೈ ಹಿಂದ್, ಜೈ ಕರ್ಣಾಟಕ ನಡೆಯಲಿದೆ.
ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ, ಪುರಸಭೆ ಮುಖ್ಯಾಧಿಕಾರಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಇತರ ತಾಲೂಕುಮಟ್ಟದ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘಟನೆ ಮುಖಂಡರು, ತಲ್ಲೂರು ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ, ದಸಂಸ ಭೀಮಗರ್ಜನೆ ರಾಜ್ಯ ಸಂಚಾಲಕ ಉದಯಕುಮಾರ್ ತಲ್ಲೂರ್, ಮೋಹನಚಂದ್ರ ಕಾಳಾವರಕರ, ಜಿಲ್ಲಾ ದೌರ್ಜನ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ವಾಸುದೇವ ಮುದೂರ, ಕೊರಗ ಸಂಘಟನೆ ಜಿಲ್ಲಾ ಅಧ್ಯಕ್ಷ ಗಣೇಶ ಕೊರಗ ಕುಂಭಾಶಿ, ವಿಜಯ ಕೆ.ಎಸ್., ಮಂಜುನಾಥ ಹಟ್ಟಿಯಂಗಡಿ ಮುಂತಾದವರು ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ ಸ್ವಾಗತಿಸಿದರು. ವ್ಯವಸ್ಥಾಪಕ ರಮೇಶ್ ಕುಲಾಲ್ ವಂದಿಸಿದರು.