ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಆಟೋ ರಿಕ್ಷಾಗಳಿಗೆ ಗುರುತು ಸಂಖ್ಯೆಯಿರುವ ಸ್ಟಿಕ್ಕರನ್ನು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು.ಕುಂದಾಪುರ ಸಂಚಾರ ಪೊಲೀಸ್ ಠಾಣೆ ಎದುರು ಭಾನುವಾರ ವಿತರಿಸಿದರು.
ಆಟೋ ಚಾಲಕರು, ಪ್ರಯಾಣಿಕರ ನಡುವಿನ ಗೊಂದಲ ತಪ್ಪಿಸಲು, ಚಾಲಕರು, ಆಟೋ ರಿಕ್ಷಾದ ಸಂಪೂರ್ಣ ವಿವರಗಳನ್ನೊಳಗೊಂಡ ದಾಖಲೆ ಸಂಗ್ರಹಿಸಿಟ್ಟುಕೊಂಡು ಯಾವುದೇ ಸಂದರ್ಭದಲ್ಲಿ ಅದರ ಉಪಯೋಗ ಪಡೆಯಲು, ಅನಧೀಕೃತ ಆಟೋ ರಿಕ್ಷಾಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಗುರುತು ಸಂಖ್ಯೆ ಸಹಕಾರಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಠಾಣೆ ಉಪನಿರೀಕ್ಷಕರಾದ ಪ್ರಸಾದ್ ಕುಮಾರ್ ಕೆ., ಸುದರ್ಶನ್, ಸಿಬ್ಬಂದಿ ಇದ್ದರು.