More

    ದ್ವಿತೀಯ ಪಿಯು ರಿಸಲ್ಟ್; ಹೆಣ್ಮಕ್ಳೇ ಸ್ಟ್ರಾಂಗ್​, ಉಡುಪಿ-ದಕ್ಷಿಣ ಕನ್ನಡ ಫಸ್ಟ್

    ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ ರಾಜ್ಯಕ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲ ಸ್ಥಾನ ಅಲಂಕರಿಸಿವೆ. ವಿಜಯಪುರ ಜಿಲ್ಲೆ ಕೊನೇ ಸ್ಥಾನ ಪಡೆದಿದೆ. ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದೆ.

    2019-20ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗೆ ಒಟ್ಟು 6,75,277 ಮಂದಿ ಹಾಜರಾಗಿದ್ದರು. ಈ ಪೈಕಿ ಹೊಸದಾಗಿ ಪರೀಕ್ಷೆ ಬರೆದವರು 5,56,267 ಮಂದಿ (ಪಾಸ್​ ಆದವರು 3,84,947). ಪುನರಾವರ್ತಿ ವಿದ್ಯಾರ್ಥಿಗಳ ಸಂಖ್ಯೆ 91, 025 (ಪಾಸ್​ ಆದವರು 25,602). ಒಟ್ಟು 4, 17, 297 ಮಂದಿ ಉತ್ತೀರ್ಣರಾಗಿದ್ದಾರೆ. 1,83,725 (ಶೇ.54.55) ಬಾಲಕರು ಮತ್ತು 2,43,572 (ಶೇ.68.73) ಬಾಲಕಿಯರು ತೇರ್ಗಡೆಯಾಗಿದ್ದಾರೆ.

    ಇದನ್ನೂ ಓದಿರಿ ನಾಲ್ಕು ಭಾಷೆಗಳಲ್ಲಿ ಡಬ್ ಆಗುತ್ತಿದೆ ಕನ್ನಡ್ ಗೊತ್ತಿಲ್ಲ

    ವಿಭಾಗವಾರು ಅತಿ ಹೆಚ್ಚು ಅಂಕ: ಕಲಾ ವಿಭಾಗದಲ್ಲಿ 594 ಅಂಕ, ವಾಣಿಜ್ಯ ವಿಭಾಗದಲ್ಲಿ 598, ವಿಜ್ಞಾನ ವಿಭಾಗ 596 ಅಂಕ ಬಂದಿದೆ. ಒಟ್ಟಾರೆ ಪಿಯು ಪರೀಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ಪಾಸ್​ ಆದವರ ಸಂಖ್ಯೆ 2,21,867. ಪ್ರಥಮ ಸ್ಥಾನದಲ್ಲಿ 2,21,867 ಮಂದಿ, ದ್ವಿತೀಯ ಸ್ಥಾನದಲ್ಲಿ 77,455 ವಿದ್ಯಾರ್ಥಿಗಳು, ತೃತೀಯ ಸ್ಥಾನದಲ್ಲಿ 49,110 ಮಂದಿ ತೇರ್ಗಡೆಯಾಗಿದ್ದಾರೆ.

    ಪ್ರಥಮ ಸ್ಥಾನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ(ಶೇ.90.71), ಎರಡನೇ ಸ್ಥಾನ ಕೊಡಗು ಜಿಲ್ಲೆಗೆ(ಶೇ.81.53), ಉತ್ತರ ಕನ್ನಡಕ್ಕೆ((ಶೇ.80.97) ಮೂರನೇ ಸ್ಥಾನ ಒಲಿದಿದೆ. ಜಿಲ್ಲಾವಾರು ಫಲಿತಾಂಶ(ಶೇಖಡವಾರು) ಹೀಗಿದೆ.

    ದ್ವಿತೀಯ ಪಿಯು ರಿಸಲ್ಟ್; ಹೆಣ್ಮಕ್ಳೇ ಸ್ಟ್ರಾಂಗ್​, ಉಡುಪಿ-ದಕ್ಷಿಣ ಕನ್ನಡ ಫಸ್ಟ್

    ವಿಭಾಗವಾರು ಫಲಿತಾಂಶ: ಕಲಾ -ಶೇ.41.27(ಕಳೆದ ವರ್ಷ ಶೇ.50.53), ವಿಜ್ಞಾನ -ಶೇ.76.02 (ಕಳೆದ ವರ್ಷ ಶೇ.66.58), ವಾಣಿಜ್ಯ -ಶೇ. 65.53(ಕಳೆದ ವರ್ಷ ಶೇ.66.39).

    ಇಂದು ಬೆಳಗ್ಗೆ 11.30ಕ್ಕೆ ಸಚಿವ ಎಸ್. ಸುರೇಶ್ ಕುಮಾರ್ ಪಿಯು ಬೋರ್ಡ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ದೇಶದಲ್ಲಿ ಮೊದಲ ರಾಜ್ಯ ಈ ಕಷ್ಟದಲ್ಲಿ ಪರೀಕ್ಷೆ ಮಾಡಿ ಫಲಿತಾಂಶ ನೀಡುತ್ತಿದೆ ಎಂದರು.

    ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗಿದೆ. ಇಲಾಖೆಯ ಅಧಿಕೃತ ಜಾಲತಾಣ www.karresults.nic.in ನಲ್ಲೂ ಫಲಿತಾಂಶ ವೀಕ್ಷಿಸಬಹುದು.

    ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ​ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts