ನಾಗ್ಪುರ್: ಕಳೆದ 15 ವರ್ಷಗಳಿಂದ ಅಂದಾಜು 50 ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ 47 ವರ್ಷದ ಮನಶಾಸ್ತ್ರಜ್ಞನನ್ನು(Psychologist) ನಾಗ್ಪುರದಲ್ಲಿ ಬಂಧಿಸಲಾಗಿದೆ.
ಎರಡು ಮಕ್ಕಳ ತಂದೆ ರಾಜೇಶ್ ಧೋಕ್ ಎಂದು ಗುರುತಿಸಲಾದ ಮನಶಾಸ್ತ್ರಜ್ಞ, ವಸತಿ ಶಿಬಿರಗಳಲ್ಲಿ ಸಮಾಲೋಚನೆ ನೀಡುವ ನೆಪದಲ್ಲಿ ಯುವತಿಯರಿಗೆ ಆಮಿಷವೊಡ್ಡಿ ಕೃತ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಶಿವಯೋಗಿ ಸಿದ್ಧರಾಮ ಜಯಂತಿ, ಸಮ ಸಮಾಜ ನಿರ್ಮಾಣವೇ ಶರಣರ ಗುರಿ ಎಂದ ಎಡಿಸಿ ಸೋಮಲಿಂಗ ಗೆಣ್ಣೂರ
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರಾಜೇಶ್ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಂಢಾರಿ ಮತ್ತು ಗೋಂಡಿಯಾದಂತಹ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಇತನು ಶಿಬಿರಗಳನ್ನು ತೆರೆದಿದ್ದಾನೆ. ಅಲ್ಲದೆ, ಗ್ರಾಮೀಣ ಪ್ರದೇಶದ ಅಮಾಯಕ ಬಾಲಕಿಯರನ್ನು ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಶಿಬಿರದ ಹೆಸರಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನ ಮಾತುಗಳಿಗೆ ನಾನು ಕ್ಷಮೆಯಾಚಿಸುತ್ತಿದ್ದೇನೆ; ನಿರ್ದೇಶಕ ತ್ರಿನಾಥರಾವ್ ಹೀಗೆಳಿದ್ದೇಕೆ? | Tollywood
ಇನ್ನು ಘಟನೆಯ ಸಂಬಂಧಿಸಿದಂತೆ ಬಾಲಕಿಯರ ಖಾಸಗಿ ಪೋಟೊಗಳನ್ನು ಸೆರೆಯಿಡಿಯುತ್ತಿದ್ದ. ಪೊಲೀಸರಿಗೆ ಮಾಹಿತಿ ಅಥವಾ ಕಂಪ್ಲೇಟ್ ಕೊಟ್ಟರೆ ಸೋಷಿಯಲ್ ಮಿಡಿಯಾದಲ್ಲಿ ಪೋಟೋ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಹಿನ್ನೆಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
ಮಕರ ಸಂಕ್ರಾಂತಿ ಪ್ರಯುಕ್ತ ಅಳಿಯನಿಗೆ ವೈವಿಧ್ಯಮಯ ಖಾದ್ಯ ಬಡಿಸಿದ ಮಾವ; ಹೇಗಿದೆ ಅಂತಾ ನೀವೇ ನೋಡಿ | Sankranti