ಹೈದರಾಬಾದ್: ಸಂದೀಪ್ ಕಿಶನ್ ಅಭಿನಯದ ‘ಮಜಾಕಾ’ ಸಿನಿಮಾವನ್ನು ತ್ರಿನಾಥರಾವ್ ನಕ್ಕಿನ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ರಿತು ವರ್ಮಾ ನಟಿಸುತ್ತಿದ್ದರೆ, ಮನ್ಮಥ ಖ್ಯಾತಿಯ ಅಂಶು ಅಂಬಾನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಏತನ್ಮಧ್ಯೆ ಟೀಸರ್ ಬಿಡುಗಡೆ ಸಮಾರಂಭದಲ್ಲಿ ತ್ರಿನಾಥ ರಾವ್ ಮಾಡಿದ ಕಾಮೆಂಟ್‌ಗಳು ಟಾಲಿವುಡ್( Tollywood) ಅಂಗಳದಲ್ಲಿ ವಿವಾದ ಹುಟ್ಟುಹಾಕಿದೆ.
ವಿವಾದ ಬೇರೆ ರೂಪ ಪಡೆಯುವ ಮೊದಲೆ ಎಚ್ಚೆತ್ತುಕೊಂಡ ತ್ರಿನಾಥ್ ರಾವ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಮಹಿಳೆಯರಿಗೆ ಕ್ಷಮೆಯಾಗಿಸಿದ್ದಾರೆ. ರಿಲೀಸ್ ಮಾಡಿರುವ ವಿಡಿಯೋದಲ್ಲಿ, ಅಂಶು ಅವರಿಗೆ ಮತ್ತು ನನ್ನ ಮಾತಿನಿಂದ ನೋವುಂಟಾಗಿರುವ ಎಲ್ಲಾ ಮಹಿಳೆಯರಿಗೆ ಕ್ಷಮೆಯಾಚಿಸುತ್ತೇನೆ. ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ನಾನು ಅದನ್ನು ತಿಳಿಯದೆ ಮಾಡಿದ್ದರೂ ಸಹ ಅದು ಇನ್ನೂ ತಪ್ಪಾಗಿದೆ. ನೀವೆಲ್ಲರೂ ನನ್ನನ್ನು ಕ್ಷಮೀಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
అందరికీ నమస్కారం ముఖ్యంగా మహిళలకి, అన్షు గారికి, మరియు నా మాటలు వల్ల బాధపడ్డ ఆడవాళ్ళందరికీ నా క్షమాపణలు తెలియజేసుకుంటున్నాను, నా ఉద్దేశ్యం ఎవరిని బాధ కలిగించడం కాదు తెలిసి చేసినా తెలియకుండా చేసిన తప్పు తప్పే మీరందరూ పెద్ద మనసు చేసుకొని నన్ను క్షమిస్తారని కోరుకుంటున్నాను 🙏🏽 pic.twitter.com/Xfui213GH2
— Trinadharao Nakkina (@TrinadharaoNak1) January 13, 2025
ಕಾರ್ಯಕ್ರಮದಲ್ಲಿ ಅಂಶು ಅವರು ಈ ಹಿಂದೆ ನೋಡಿದ್ದಕ್ಕಿಂತಲೂ ತೆಳ್ಳಗಿದ್ದರು. ಈ ರೀತಿ ತೆಳ್ಳಗಿದ್ದರೆ ತೆಲುಗು ಪ್ರೇಕ್ಷಕರು ನೋಡುವುದಿಲ್ಲ. ಆಗಾಗಿ ಎಲ್ಲವನ್ನು ಸ್ವಲ್ಪ ದಪ್ಪ ಮಾಡಿಕೊಳ್ಳುವಂತೆ ಹೇಳಿದ್ದೆ, ಈಗ ಸ್ವಲ್ಪ ಪರವಾಗಿಲ್ಲ, ಮುಂದೆ ಇನ್ನೂ ಸ್ವಲ್ಪ ದಪ್ಪವಾಗುತ್ತಾರೆ ಎಂದೆನ್ನಿಸುತ್ತದೆ ಎಂದು ಹೇಳಿದ್ದರು.
Director #TrinadhaRaoNakkina makes sexist remarks against #Anshu
“Is she looking the same? I think she has become a bit thin. I requested her to eat well as everything has to be in bigger size to meet the standards of Telugu cinema. She’s improving.”pic.twitter.com/ASVKA3Gq3N
— Cinemania (@CinemaniaIndia) January 12, 2025
ಮಜಾಕಾ ಸಿನಿಮಾ ಫೆಬ್ರವರಿ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸಂದೀಪ್ ಕಿಶನ್, ರಿತು ವರ್ಮಾ, ಅಂಶು ಜತೆಗೆ ರಾವ್ ರಮೇಶ್, ಮುರಳಿ ಶರ್ಮಾ, ಶ್ರೀನಿವಾಸ್ ರೆಡ್ಡಿ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್)
ಜೀವನ ಸಂಗಾತಿ ಬೇಡವೆಂದಲ್ಲ.. ನೋ ಎನ್ನಲು ಇರುವುದು ಈ ಕಾರಣ; ನಟಿ ಮನೀಶಾ ಕೋಯಿರಾಲಾ ಹೇಳಿದ್ದೇನು | Manisha Koirala