

ಮುಂಬೈ: ಆಶಿಕಿ ಮತ್ತು ಆಶಿಕಿ 2 ರ ದೊಡ್ಡ ಯಶಸ್ಸಿನ ನಂತರ ಆಶಿಕಿ 3 ಸಿನಿಮಾ ಸುದ್ದಿ ಬಾಲಿವುಡ್ ಅಂಗಳದಲ್ಲಿ ಬಹಳ ದಿನಗಳಿಂದ ಹರಿದಾಡುತ್ತಿದೆ. ರಾಹುಲ್ ರಾಯ್, ಆದಿತ್ಯ ರಾಯ್ ಕಪೂರ್ ನಂತರ ಕಾರ್ತಿಕ್ ಆರ್ಯನ್ ಆಶಿಕಿ ಸಿನಿಮಾದಲ್ಲಿ ದೊಡ್ಡ ಪರದೆಯ ಮೇಲೆ ಮಿಂಚಲಿದ್ದಾರೆ. ಕಾರ್ತಿಕ್ ಎದುರು ನಾಯಕಿಯಾಗಿ ತೃಪ್ತಿ ದಿಮ್ರಿ(Triptii Dimri) ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತಿತ್ತು. ಆದರೆ ಈಗ ಸಿನಿಮಾದಿಂದ ತೃಪ್ತಿ ದಿಮ್ರಿ ಅವರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ತೃಪ್ತಿ ದಿಮ್ರಿ ‘ಅನಿಮಲ್‘ ಚಿತ್ರದ ಮೂಲಕ ದೊಡ್ಡ ಯಶಸ್ಸನ್ನು ಪಡೆದರು. ಭೂಲ್ ಭುಲೈಯಾ 3 ಜತೆಗೆ ಅವರು ಕಾರ್ತಿಕ್ ಆರ್ಯನ್ ಅವರೊಂದಿಗೆ ಆಶಿಕಿ 3 ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ಆದರೆ ಇದೀಗ ಸಿನಿಮಾದಿಂದ ನಟಿಯನ್ನು ತೆಗೆದುಹಾಕಲಾಗಿದೆ. ತೃಪ್ತಿ ಅವರ ನಿರ್ಗಮನದ ಸುದ್ದಿ ಹೊರಬಿದ್ದ ತಕ್ಷಣ ಜನರು ಕಾರಣ ಏನೀರಬಹುದು ಎಂದು ಹುಡುಕಾಟ ನಡೆಸುತ್ತಿದ್ದಾರೆ.
ಅನಿಮಲ್ ಸಿನಿಮಾದಲ್ಲಿನ ಬೋಲ್ಡ್ನೆಸ್ನಿಂದಾಗಿ ತೃಪ್ತಿ ದಿಮ್ರಿ ಅವರನ್ನು ಹೊರಹಾಕಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಅನಿಮಲ್‌ನಲ್ಲಿ ಜೋಯಾ ಪಾತ್ರದ ನಂತರ ಉದ್ಯಮದಲ್ಲಿ ಅವರ ಇಮೇಜ್ ಕೂಡ ಬದಲಾಗಿದೆ. ಆಶಿಕಿ 3 ಸಿನಿಮಾಗಾಗಿ ಚಿತ್ರತಂಡ ಮುಗ್ಧ ಹುಡುಗಿಯನ್ನು ಹುಡುಕುತ್ತಿದ್ದರು. ತೃಪ್ತಿ ತನ್ನ ಮುಗ್ಧತೆಯನ್ನು ಕಳೆದುಕೊಂಡಿದ್ದಾಳೆ ಈ ಕಾರಣದಿಂದಾಗಿ ಅವರು ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂದು ತಯಾರಕರು ನಂಬುತ್ತಾರೆ ಎಂಬ ವದಂತಿಗಳು ವೈರಲ್ ಆಗುತ್ತಿವೆ.
ಈ ಊಹಾಪೋಹಗಳಿಗೆ ಸಿನಿಮಾದ ನಿರ್ದೇಶಕ ಅನುರಾಗ್ ಬಸು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ ನಿರ್ದೇಶಕ ಅನುರಾಗ್ ಬಸು ಇದೆಲ್ಲಾ ಸುಳ್ಳು ಎಂದಿದ್ದಾಎರ. ಅನಿಮಲ್ ಸಿನಿಮಾ ಪಾತ್ರ ಅಥವಾ ಬೋಲ್ಡ್ ಇಮೇಜ್ನಿಂದಾಗಿ ತೃಪ್ತಿಯನ್ನು ಚಿತ್ರದಿಂದ ಕೈಬಿಟ್ಟಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಷ್ಟಕ್ಕೂ ಆಕೆ ಯಾಕೆ ಸಿನಿಮಾದಿಂದ ಹೊರಬಿದ್ದಿದ್ದಾಳೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.
ಸದ್ಯ ತೃಪ್ತಿ ದಿಮ್ರಿ ನಿರ್ಗಮನದ ನಂತರ ಆಶಿಕಿ 3 ಚಿತ್ರದ ಹೊಸ ನಾಯಕಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ನಿರ್ಮಾಪಕರು ನಾಯಕಿಯ ಹುಡುಕಾಟದಲ್ಲಿದ್ದರು ಮತ್ತು ಚಿತ್ರವು ಸ್ವಲ್ಪ ಸಮಯದವರೆಗೆ ಮುಂದೂಡಲ್ಪಟ್ಟಿದೆ. ಪ್ರಸ್ತುತ ಕಾರ್ತಿಕ್ ಆರ್ಯನ್ ಅನುರಾಗ್ ಬಸು ಅವರೊಂದಿಗೆ ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ.
ತೃಪ್ತಿ 6 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ವಿಶಾಲ್ ಭಾರದ್ವಾಜ್ ನಿರ್ಮಿಸುತ್ತಿರುವ ಸಾಜಿದ್ ನಾಡಿಯಾಡ್ವಾಲಾ ಚಿತ್ರದ ಚಿತ್ರೀಕರಣಕ್ಕೆ ಹೋಗುವುದಾಗಿ ತಿಳಿಸಿದ್ದರು. ಈ ಚಲನಚಿತ್ರವು 5 ಡಿಸೆಂಬರ್ 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಶಾಹಿದ್ ಕಪೂರ್, ರಣದೀಪ್ ಹೂಡಾ ಮತ್ತು ನಾನಾ ಪಾಟೇಕರ್ ಮುಂತಾದವರು ನಟಿಸಿದ್ದಾರೆ.(ಏಜೆನ್ಸೀಸ್)