ಮಾರ್ಚ್ ತಿಂಗಳ ಪಿಎಫ್ ವಂತಿಗೆ ಅವಧಿ ವಿಸ್ತರಣೆ: ಉದ್ಯೋಗಸ್ಥರು, ಉದ್ಯೋಗದಾತರು ಇಬ್ಬರೂ ನಿರಾಳ

epfo
Published on

ನವದೆಹಲಿ: ಮಾರ್ಚ್ ತಿಂಗಳ ಭವಿಷ್ಯ ನಿಧಿ (ಪಿಎಫ್) ವಂತಿಗೆ ಪಾವತಿಸುವ ಅವಧಿಯನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೇ ತಿಂಗಳವರೆಗೆ ಮುಂದೂಡಿದ್ದು, ಇದರಿಂದ 6 ಲಕ್ಷ ಉದ್ಯೋಗದಾತ ಸಂಸ್ಥೆಗಳಿಗೆ ಮತ್ತು 5 ಕೋಟಿ ಉದ್ಯೋಗಸ್ಥರಿಗೆ ಸಹಾಯವಾಗಲಿದೆ.

ಈ ವಂತಿಗೆಯನ್ನು ಏಪ್ರಿಲ್ 15ರೊಳಗೆ ಪಾವತಿಸಬೇಕಾಗಿತ್ತು. ಅದಕ್ಕೀಗ ಮೇ 15ರವರೆಗೂ ಸಮಯ ಸಿಗಲಿದೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದ ಉದ್ಯೋಗಿಗಳು ಮತ್ತು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದಕ್ಕಾಗಿ ಈ ಅವಧಿ ವಿಸ್ತರಣೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಇಪಿಎಫ್‌ಒ ಬುಧವಾರ ತಿಳಿಸಿದೆ.

ಮಾರ್ಚ್ ತಿಂಗಳ ವೇತನವನ್ನು ಪಾವತಿಸಿದ ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ. ಇದಲ್ಲದೇ ಮೇ 15ರೊಳಗೆ ಬಾಕಿ ವಂತಿಗೆ ಪಾವತಿಸುವ ಸಂಸ್ಥೆಗಳಿಗೆ ಬಡ್ಡಿ ಮತ್ತು ದಂಡದಿಂದಲೂ ವಿನಾಯಿತಿ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net