More

    ಮಗನ ಔಷಧಕ್ಕಾಗಿ ತಾಯಿಯ ಗೋಳಾಟ: ವಿಡಿಯೋಗೆ ಒಂದೇ ಗಂಟೆಯಲ್ಲಿ ಸಿಕ್ಕಿತು ಸ್ಪಂದನೆ!

    ರಾಣೆಬೆನ್ನೂರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರೂವರೆ ವರ್ಷದ ಕಂದಮ್ಮನ ಔಷಧಕ್ಕಾಗಿ ತಾಯಿಯೊಬ್ಬಳು ಪರದಾಡುತ್ತಿದ್ದಾಳೆ. ‘ನನ್ನ ಮಗನಿಗೆ ಔಷಧ ತರಿಸಿಕೊಟ್ಟು ಆತನ ಜೀವ ಉಳಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ಮನವಿ ಮಾಡಿಕೊಂಡಿದ್ದಾಳೆ.

    ಇಲ್ಲಿಯ ರಂಗನಾಥ ನಗರದ ನಿವಾಸಿ ಜ್ಯೋತಿ ಮಡಿವಾಳರ ಔಷಧಕ್ಕಾಗಿ ಮನವಿ ಮಾಡಿಕೊಂಡವರು. ಇವರ ಮೂರೂವರೆ ವರ್ಷದ ಮಗ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯ ವೈದ್ಯರು, ಥಯಾಮಿನ್ ಹೈಡ್ರೋಕ್ಲೋರೈಡ್ ಮತ್ತು ರಿಬೋಫ್ಲಾವಿನ್ ಸಿರಫ್ ಔಷಧ ಕೊಟ್ಟು ನಿತ್ಯ ತೆಗೆದುಕೊಳ್ಳಲು ತಿಳಿಸಿದ್ದರು.

    ಅದರಂತೆ ಜ್ಯೋತಿ ಕಳೆದ ಒಂದು ವರ್ಷದಿಂದ ಮಗನಿಗೆ ನಿತ್ಯ ಔಷಧ ಕೊಡುತ್ತಿದ್ದರು. ಆದರೆ, ಮಾರ್ಚ್ ಕೊನೆಗೆ ಔಷಧ ಖಾಲಿಯಾಗಿದೆ. 15 ದಿನದಿಂದ ನಗರದ ಎಲ್ಲ ಔಷಧ ಅಂಗಡಿಗಳಲ್ಲಿ ಹುಡುಕಿದರೂ ದೊರೆತಿಲ್ಲ. ನಂತರ ಔಷಧ ಮಣಿಪಾಲ ಆಸ್ಪತ್ರೆ ಹೊರತು ಪಡಿಸಿ ಬೇರೆಲ್ಲೂ ದೊರಕುವುದಿಲ್ಲ ಎಂಬುದು ಗೊತ್ತಾಗಿದೆ.

    ಆದರೆ, ಮಣಿಪಾಲಕ್ಕೆ ಹೋಗಿ ಬರಲು ಜ್ಯೋತಿ ಬಳಿ ವಾಹನವಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದು ಸಾಧ್ಯವೂ ಇಲ್ಲ. ಇದರಿಂದ ನೊಂದ ಜ್ಯೋತಿ, ತನ್ನ ಸಂಕಷ್ಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಒಂದೇ ಗಂಟೆಯಲ್ಲಿ ಸ್ಪಂದಿಸಿದ ವೈದ್ಯ: ಜ್ಯೋತಿ ಮಡಿವಾಳರ ವಿಡಿಯೋ ಹಾಕಿ ಒಂದು ಗಂಟೆಯಲ್ಲಿ ಬಹಳಷ್ಟು ವಾಟ್ಸ್‌ಆ್ಯಪ್ ಗ್ರುಪ್‌ಗಳಿಗೆ ಫಾರ್ವರ್ಡ್ ಆಯಿತು. ಇದನ್ನು ನೋಡಿದ ಬ್ಯಾಡಗಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಟ್ಟರಾಜ, ಮಣಿಪಾಲದಿಂದ ಔಷಧ ತರಿಸಲು ವ್ಯವಸ್ಥೆ ಮಾಡಿದರು. ಮಣಿಪಾಲ ಆಸ್ಪತ್ರೆಯಲ್ಲಿ ತಮಗೆ ಪರಿಚಯವಿರುವ ಕಾರಣ ತಮ್ಮ ಆಸ್ಪತ್ರೆ ಸಿಬ್ಬಂದಿಯನ್ನು ಮಣಿಪಾಲಕ್ಕೆ ಕಳುಹಿಸಿದರು. ಏ. 16ರ ರಾತ್ರಿಯೊಳಗೆ ಔಷಧ ಕೈ ಸೇರಲಿದೆ ಎಂದು ಜ್ಯೋತಿಗೆ ಭರವಸೆ ನೀಡಿ, ಧೈರ್ಯ ತುಂಬಿದ್ದಾರೆ.

    FACT CHECK |ನಿದ್ರಿಸುತ್ತಿದ್ದ ಶವಾಗಾರದ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ತಿಳಿದು ಜೀವಂತ ಸಂಸ್ಕಾರ ಮಾಡಿದ ಘಟನೆ ನಿಜವೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts