

ಸಿಡ್ನಿ: ನೆಟ್ಟಿಗರನ್ನು ಗೊಂದಲಕ್ಕೀಡುಮಾಡಿ ತಲೆ ಕೆರೆದುಕೊಳ್ಳುವಂತೆ ಮಾಡುವ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ಮತ್ತೊಂದು ಫೋಟೋವನ್ನು ಸ್ನೇಕ್ ಕ್ಯಾಚರ್ ನಾರ್ಥನ್ ರಿವರ್ಸ್ 24/7 ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ನೆಟ್ಟಿಗರ ಕಣ್ಣಿನ ದೃಷ್ಟಿ ಜತೆಗೆ ತಾಳ್ಮೆಯನ್ನು ಪರೀಕ್ಷಿಸಿದೆ.
ಆಸ್ಟ್ರೇಲಿಯಾದ ಗ್ರೀನ್ ಫಾರೆಸ್ಟ್ನಲ್ಲಿ ತೆಗೆದ ಚಿತ್ರವನ್ನು ಹಾವನ್ನು ರಕ್ಷಿಸುವ ಗ್ರೂಪ್ ಒಂದು ಆಸ್ಟ್ರೇಲಿಯಾದ ಸ್ನೇಕ್ ಕ್ಯಾಚರ್ ನಾರ್ಥನ್ ರಿವರ್ಸ್ 24/7 ಫೇಸ್ಬುಕ್ನಲ್ಲಿ ಕಳೆದ ಗುರುವಾರ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸುತ್ತಲೂ ಮರಗಳಿರುವ ಸರಳ ಚಿತ್ರದಲ್ಲಿ ಹಾವು ಕೂಡ ಇದ್ದು, ತುಂಬಾ ಜಾಗರೂಕತೆಯಿಂದ ನೋಡಿದರೆ ಹಾವನ್ನು ಪತ್ತೆ ಹಚ್ಚಬಹುದಾಗಿದೆ.
ಫೋಟೋದಲ್ಲಿರುವ ಹಾವನ್ನು ಪತ್ತೆಹಚ್ಚಿ ಎಂದು ಸ್ನೇಕ್ ಕ್ಯಾಚರ್ ನಾರ್ಥನ್ ರಿವರ್ಸ್ ಫೇಸ್ಬುಕ್ ಫಾಲೋವರ್ಸ್ಗೆ ಸವಾಲು ಹಾಕಿದ್ದಾರೆ. ಫೋಟೋದಲ್ಲಿ ಹಾವನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವೇನಲ್ಲ. ಬಹಳಷ್ಟು ಸೂಕ್ಷ್ಮವಾಗಿ ಗಮನಿಸಿದರೂ ತಲೆಗೆ ಹುಳ ಬಿಟ್ಟಂತಾಗುವುದು ಖಂಡಿತ. ಅದಕ್ಕೆ ಫೇಸ್ಬುಕ್ ಪೇಜ್ನಲ್ಲಿ ಫೋಟೋ ಕುರಿತು ಹರಿದುಬಂದಿರುವ ಕಮೆಂಟ್ಗಳೇ ಸಾಕ್ಷಿಯಾಗಿದೆ.
ನನ್ನ ಕೈಯಲ್ಲಿ ಈರೆಗೂ ಪತ್ತೆ ಮಾಡಲು ಆಗುತ್ತಿಲ್ಲ ಎಂದು ನೆಟ್ಟಿಗನೋರ್ವ ತಿಳಿಸಿದ್ದರೆ, ಇನ್ನೋರ್ವ ನಾನು ಈಗಲೂ ಹುಡುಕುತ್ತಿದ್ದೇನೆ ಎಂದು ಕಮೆಂಟಿಸಿದ್ದಾರೆ. ಇನ್ನು ಕೆಲವರು ಹಾವಿನ ರೂಪವನ್ನು ಹುಡುಕಿ, ಗುರುತು ಮಾಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)