ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

New Project (2)
Published on

ಉಪ್ಪಿನಂಗಡಿ: ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಪ್ಪಿನಂಗಡಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಮುನೀರ್ ಕಾಟಿಪಳ್ಳ ಮಾತನಾಡಿ, ವಕ್ಫ್ ಕಾಯ್ದೆ ಹೆಸರಿನಲ್ಲಿ ಮುಸ್ಲಿಂ ಸಮುದಾಯ ತಾಳ್ಮೆ ಕಳೆದುಕೊಳ್ಳಬಾರದು. ಸಮಾಜದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಬೇಕು ಎಂದರು.

ಅಬ್ದುಲ್ ರಶೀದ್ ಝೈನ್, ಅನ್ವರ್ ಸಾದತ್, ಇಸಾಕ್ ಪುತ್ತೂರು, ಇಕ್ಬಾಲ್ ಬಾಳಿಲ, ಸುಧೀರ್ ಮಾರೋಳ್ಳಿ ಮೊದಲಾದವರು ಮಾತನಾಡಿದರು. ಯೂಸುಫ್, ಅನಸ್ ತಂಗಳ್, ಎಂ.ಎಸ್.ಮಹಮ್ಮದ್, ಶಾಹುಲ್ ಹಮೀದ್ ಕೆ.ಕೆ., ಡಾ.ರಾಜಾರಾಮ ಕೆ.ಬಿ., ಮುರಳೀಧರ್ ರೈ, ಅಜೀಜ್ ಬಸ್ತಿಕಾರ್, ಅಮೀನ್ ಅಹ್ಸನ್, ಸೋಮನಾಥ, ಶಬೀರ್ ಕೆಂಪಿ, ರಶೀದ್ ಮಠ, ತೌಷಿಪ್ ಯು.ಟಿ., ಮಹಮ್ಮದ್ ಹಾಜಿ ನೆಕ್ಕಿಲಾಡಿ, ಯು.ಟಿ.ಇರ್ಷಾದ್, ಮಹಮ್ಮರ್ ಮುಸ್ತಾಫ, ಅಬ್ದುಲ್ ಮಜೀದ್, ಇಸುಬು ಪೆದಮಲೆ, ಇಸ್ಮಾಯಿಲ್ ತಂಗಳ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net