ಪುತ್ತೂರು-ಸುಬ್ರಹ್ಯಣ್ಯ ಉಚಿತ ರೈಲು ಪ್ರಯಾಣ! - ನಿಲ್ದಾಣದಲ್ಲಿಲ್ಲ ಟಿಕೆಟ್ ವಿತರಣೆ ವ್ಯವಸ್ಥೆ - ಇಲಾಖೆಗೆ ಲಕ್ಷಾಂತರ ರೂ. ನಷ್ಟ

indian-railways-1612445249-1704939791-1711000649
Published on

ಮಂಗಳೂರಿನಿಂದ-ಸುಬ್ರಹ್ಮಣ್ಯವರೆಗೆ ಬೆಳಗ್ಗಿನ ಜಾವ ತೆರಳುವ ಪ್ರಯಾಣಿಕರ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ಟಿಕೆಟ್ ವಿತರಣೆಗೆ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿಯಿದ್ದು, ಇಲಾಖೆಗೆ ಲಕ್ಷಾಂತರ ರೂ. ನಷ್ಟ ಸಂಭವಿಸುವಂತಾಗಿದೆ.

ಮಂಗಳೂರು-ಕಬಕ ಪುತ್ತೂರು ನಡುವೆ ಓಡಾಡುತ್ತಿದ್ದ ಪ್ರಯಾಣಿಕರ ರೈಲನ್ನು ಕೆಲದಿನಗಳ ಹಿಂದೆ ಸುಬ್ರಹ್ಮಣ್ಯವರೆಗೆ ವಿಸ್ತರಣೆ ಮಾಡಲಾಗಿದೆ.

ಮಂಗಳೂರಿನಿಂದ ಬೆಳಗ್ಗೆ ೪ಕ್ಕೆ ಹೊರಡುವ ರೈಲು ೫.೨೦ಕ್ಕೆ ಕಬಕ ಪುತ್ತೂರು ತಲುಪುತ್ತದೆ. ಆದರೆ ಇಲ್ಲಿನ ಟಿಕೆಟ್ ಕೌಂಟರ್ ತೆರೆಯುವುದು ಬೆಳಗ್ಗೆ ೮ ಗಂಟೆಗೆ. ಈ ರೈಲಿನಲ್ಲಿ ಸುಬ್ರಹ್ಮಣ್ಯ ಸಂಚರಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡುವ ವ್ಯವಸ್ಥೆಯೇ ಇಲ್ಲ. ಟಿಕೆಟ್ ನೀಡುವ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ಸಂಚರಿಸುವುದಿಲ್ಲ ಎಂಬ ಕಾರಣ ನೀಡಿ ಕಾಲ ಕ್ರಮೇಣ ರೈಲನ್ನು ನಿಲ್ಲಿಸುವ ಹುನ್ನಾರ ನಡೆಸಲಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.

*೪೦೦ಕ್ಕೂ ಅಽಕ ಮಂದಿ ಪ್ರಯಾಣ:

ಗುರುವಾರ ರಾತ್ರಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ಸುಬ್ರಹ್ಮಣ್ಯ ಭಾಗದಿಂದ ಆಗಮಿಸಿದ ನೂರಾರು ಭಕ್ತರು ಬೆಳಗ್ಗಿನ ರೈಲಿನ ಮೂಲಕ ಹಿಂದಿರುಗಿದ್ದಾರೆ. ಈ ಸಂದರ್ಭ ಟಿಕೆಟ್ ಕೌಂಟರ್ ಬಂದ್ ಇದ್ದುದರಿಂದ ರೈಲು ಬರುತ್ತಿದ್ದಂತೆ ಪ್ರಯಾಣಿಕರು ರೈಲೇರಿ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಕೆಲವು ಮಂದಿ ಯುಟಿಎಸ್ ಆಪ್‌ನಲ್ಲಿ ಟಿಕೆಟ್ ಮಾಡಿದ್ದು ಬಿಟ್ಟರೆ, ೪೦೦ಕ್ಕೂ ಅಽಕ ಮಂದಿ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರಯಾಣಿಸುವಂತಾಗಿದೆ. ಬೆಳಗ್ಗಿನ ಜಾವ ತೆರಳುವ ರೈಲಿನಲ್ಲಿ ಟಿಕೆಟ್ ತಪಾಸಣೆಯೂ ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net