ಪಂಚಾಯಿತಿ ಭ್ರಷ್ಟಾಚಾರ ವಿರುದ್ಧ 5ರಂದು ಪ್ರತಿಭಟನೆ

Ksd_Protest
Published on

ಕುಂಬಳೆ: ಕುಂಬಳೆ ಪಂಚಾಯಿತಿಯ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕುಂಬಳೆ ಪಂಚಾಯಿತಿ ಅಧ್ಯಕ್ಷರು ನೇರವಾಗಿ ಶಾಮೀಲಾಗಿದ್ದು, ಅಧ್ಯಕ್ಷರು ಕೂಡಲೇ ರಾಜಿನಾಮೆ ನೀಡಬೇಕೆಂದು ಅಗ್ರಹಿಸಿ ಪಂಚಾಯಿತಿ ಮುಂಭಾಗದಲ್ಲಿ ಆ.5ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ಕುಂಬಳೆ ಪಂಚಾಯಿತಿ ಸಮಿತಿ ನಿರ್ಧರಿಸಿತು. ಈ ಬಗ್ಗೆ ಮಂಗಳವಾರ ಕುಂಬಳೆಯ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ಪ್ರತಿಭಟನೆ ನೇತೃತ್ವ ವಹಿಸಲು ಸಮಿತಿ ನಿರ್ಧರಿಸಿತು. ಬಿಜೆಪಿ ಕುಂಬಳೆ ಪಂಚಾಯಿತಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ, ಮಂಡಲ ಅಧ್ಯಕ್ಷ ಸುನೀಲ್ ಕುಮಾರ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ, ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್, ಮಂಡಲ ಕಾರ್ಯದರ್ಶಿ ಕೆ.ಸುಧಾಕರ್ ಕಾಮತ್, ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಕುಂಬಳೆ ಮಂಡಲ ಕಚೇರಿ ಕಾರ್ಯದರ್ಶಿ ಶಶಿ ಕುಂಬಳೆ, ಯುವಮೋರ್ಚಾ ಕುಂಬಳೆ ಪಂಚಾಯಿತಿ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪಂಚಾಯಿತಿ ಸದಸ್ಯ ಅಜಯ ಎಂ. ಸ್ವಾಗತಿಸಿದರು. ವಿದ್ಯಾ ಎನ್.ಪೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net