ಸುಳ್ಯ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಜ.18ರಂದು ಸುಳ್ಯ ವಲಯ ಅರಣ್ಯ ಇಲಾಖೆ ಕಚೇರಿ ಬಳಿ ನಡೆಸಲಾಗುವುದು ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಸಂಚಾಲಕ ಚಂದ್ರಶೇಖರ ಬಾಳುಗೋಡು ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ವಾತನಾಡಿ, ಪರಿಸರ ಸಂರಕ್ಷಣೆಯ ನೆಪದಲ್ಲಿ ರೈತರಿಗೆ ಸಮಸ್ಯೆ ಆಗುವ ಯೋಜನೆಗಳ ವಿರುದ್ಧ 2011ರಿಂದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ನಿರಂತರ ಹೋರಾಟ ವಾಡಿಕೊಂಡು ಬಂದಿದೆ. ರಾಜ್ಯದ ಪಶ್ಚಿಮ ಟ್ಟಕ್ಕೂ, ಜನವಸತಿ ಪ್ರದೇಶಕ್ಕೂ, ಕೃಷಿ ಭೂಮಿಗೂ ಗಡಿ ಗುರುತು ವಾಡಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ವಾಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುತ್ತದೆ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು. ಕಾಡುಪ್ರಾಣಿಗಳಿಂದ ಕೃಷಿ ನಾಶ ಆಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪ್ಲಾಟಿಂಗ್ ಆಗದ ಹಕ್ಕುಪತ್ರಗಳಿಗೆ ಅಥವಾ ಸರ್ವೇ ನಂಬರ್‌ಗಳಿಗೆ ತಕ್ಷಣ ಪ್ಲಾಟಿಂಗ್ ಆಗುವ ರೀತಿಯಲ್ಲಿ ಅನುಮತಿ ನೀಡಬೇಕು. ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೇ ನಂಬರ್‌ಗಳನ್ನು ಪುನರ್ ಪರಿಶೀಲನೆ ವಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹರಿಪ್ರಸಾದ್ ಪಾನತ್ತಿಲ, ರಾಜೇಶ್ ಭಟ್ ನೆಕ್ಕಿಲ, ತೀರ್ಥರಾಮ ನೆಡ್ಚಿಲ್ ಹಾಗೂ ಎ.ಜಿ.ಕರುಣಾಕರ ಉಪಸ್ಥಿತರಿದ್ದರು.
ಸರಿಸಾಟಿ ಇಲ್ಲದ ಸರಪಾಡಿ ಪಾತ್ರ ನಿರ್ವಹಣೆ: ಸಂಘಟಕ ಬಿ.ಭುಜಬಲಿ ಮೆಚ್ಚುಗೆ ಯಕ್ಷಪಯಣದ 50ರ ಸಂಭ್ರಮ