ವಂಚನೆ ಪ್ರಕರಣ: 60 ಕೋಟಿ ರೂ. ಸಾಲ ಪಡೆದು ವೈಯಕ್ತಿಕ ಖರ್ಚಿಗೆ ಬಳಸಿದ್ರಾ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ? Fraud case

raj kundra
Published on

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ಪತಿ ರಾಜ್ ಕುಂದ್ರಾ ಅವರ ಮೇಲಿನ 2015 ರ 60 ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ (Fraud case) ಮುಂಬೈ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (EOW) ಗಂಭೀರ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ.

EOW ಅಧಿಕಾರಿಗಳ ಪ್ರಕಾರ, 2015 ರಲ್ಲಿ ಉದ್ಯಮಿ ದೀಪಕ್ ಕೋಥಾರಿ ಅವರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಕಂಪನಿಗೆ 60 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದನ್ನು ಶೇ. 12 ರಷ್ಟು ಬಡ್ಡಿತ್ವದೊಂದಿಗೆ ಆನ್‌ಲೈನ್ ಶಾಪಿಂಗ್ ವ್ಯವಹಾರಕ್ಕಾಗಿ ನೀಡಲಾಗಿತ್ತು. ಆದರೆ, ಕಂಪನಿಯು ಈ ಹಣವನ್ನು ಮರುಪಾವತಿಸದೇ, ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ಹಣದ ನಿಖರವಾದ ಮಾರ್ಗ ಮತ್ತು ಬಳಕೆಯನ್ನು ಪತ್ತೆಹಚ್ಚಲು EOW ಮೂರನೇ ವ್ಯಕ್ತಿಯ ಸಲಹೆಯನ್ನು ಪಡೆದಿದ್ದು, ವಿಧಿವಿಜ್ಞಾನಗಳ ಮೂಲಕ ಲೆಕ್ಕಪರಿಶೋಧನೆಯನ್ನು ನಡೆಸಲು ಸಜ್ಜಾಗಿದೆ.

ಹಣವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗಿದೆ ಮತ್ತು ಶೆಟ್ಟಿ ಮತ್ತು ಕುಂದ್ರಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಸತ್ಯುಗ್ ಗೋಲ್ಡ್, ವಿಯಾನ್ ಇಂಡಸ್ಟ್ರೀಸ್, ಎಸೆನ್ಷಿಯಲ್ ಬಲ್ಕ್ ಕಮಾಡಿಟೀಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಇತರ ಸಂಸ್ಥೆಗಳಿಗೆ ಪಾವತಿಸಲು ಅವುಗಳನ್ನು ಬಳಸಲಾಗಿದೆಯೇ ಎಂಬುದನ್ನು ಲೆಕ್ಕಪರಿಶೋಧನೆಯು ನಿರ್ಧರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಪ್ರಯಾಣ, ಪ್ರಸಾರ, ಗೋದಾಮು ಮತ್ತು ಕಚೇರಿ ವೆಚ್ಚಗಳು ಸೇರಿದಂತೆ - ಹಣವನ್ನು ವ್ಯಾಪಾರ ವೆಚ್ಚಗಳಾಗಿ ತೋರಿಸಲಾಗಿದೆ ಇವು ಕಟ್ಟು ಕಥೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ದಂಪತಿಗಳ ಹೇಳಿಕೆ ಪ್ರಕಾರ, ಕೊರಿಯರ್ ಕಂಪನಿ ಮತ್ತು ಬೆಸ್ಟ್ ಡೀಲ್ ಟಿವಿ ತೊಡಗಿಸಿಕೊಂಡಿರುವ ಮಾಧ್ಯಮ ಪರಿಹಾರ ಸಂಸ್ಥೆ ಸೇರಿದಂತೆ ಹಲವಾರು ಮಾರಾಟಗಾರರಿಗೆ ಹಣ ಪಾವತಿಸಿದ್ದೇವೆ ಎಂದಿದ್ದರು. ಆದರೆ ಇವರು ಯಾವುದೇ ಹಣವನ್ನು ನೀಡಿಲ್ಲ ಎಂದು EOW ಮೂಲಗಳು ಬಹಿರಂಗಪಡಿಸಿವೆ. ಇನ್ನು ಸಂಸ್ಥೆಗಳ ಮಾಜಿ ಉದ್ಯೋಗಿಗಳ ಹೇಳಿಕೆಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡಲಿದೆ ಎಂದು ತಿಳಿಸಿದ್ದಾರೆ.

ಈ ಮೊದಲು, ರಾಜ್ ಕುಂದ್ರಾ ಅವರನ್ನು ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಈ ವೇಳೆ 60 ಕೋಟಿ ರೂ.ಗಳನ್ನು ಸಾಲವಾಗಿ ತೆಗೆದುಕೊಳ್ಳಲಾಗಿತ್ತು, ತದನಂತರ ಅದನ್ನು ಈಕ್ವಿಟಿಯಾಗಿ (equity) ಪರಿವರ್ತಿಸಲಾಗಿದೆ ಎಂದು ಅವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಸಾರ ಶುಲ್ಕ, ಸೆಲೆಬ್ರಿಟಿ ಅನುಮೋದನೆಗಳು ಮತ್ತು ಇತರ ಪ್ರಚಾರ ವೆಚ್ಚಗಳಿಗಾಗಿ 20 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಹಾಗೆಯೇ ಬ್ರಾಂಡ್ ಪ್ರಚಾರಕ್ಕಾಗಿ ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರನ್ನು ಕುಂದ್ರಾ ಹೆಸರಿಸಿದ್ದು, ಅದಕ್ಕೆ ನೀಡಬೇಕಾದ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ.

ದೂರುದಾರರ ಎನ್‌ಬಿಎಫ್‌ಸಿಗೆ ಈಕ್ವಿಟಿ ಷೇರುಗಳನ್ನು ನೀಡುವ ಮೊದಲು ಯಾವುದೇ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿದೆ ಎಂದು ಅಧಿಕಾರಿಗಳು ಆರೋಪ ಮಾಡಿದ್ದಾರೆ.

ನೋಟು ರದ್ದತಿಯಿಂದಾಗಿ ವ್ಯವಹಾರದಲ್ಲಿ ಅಪಾರ ನಷ್ಟವನ್ನು ಅನುಭವಿಸಬೇಕಾಯಿತು. ಏಕೆಂದರೆ ಅದು ಹೆಚ್ಚಾಗಿ ಕ್ಯಾಶ್-ಆನ್-ಡೆಲಿವರಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಅಂತಿಮವಾಗಿ ಅದನ್ನು ಮುಚ್ಚಬೇಕಾಯಿತು ಎಂದು ಕುಂದ್ರಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net