ಖ್ಯಾತ ನಿರ್ಮಾಪಕರ ಪುತ್ರ-ನಟನ ಪುಂಡಾಟ; ಯಾರದ್ದೋ ಮನೆಯ ಕೆಲಸದವರ ಮೇಲೆ ಹಲ್ಲೆ ಆರೋಪ

Feature
ಮಾಸ್ಟರ್ ಸ್ನೇಹಿತ್ ಮತ್ತು ಕುಟುಂಬ
Published on

ಬೆಂಗಳೂರು: ಬಾಲಿವುಡ್​ನಲ್ಲಿ ಪುತ್ರನಿಂದಾಗಿ ನಟ ಶಾರುಖ್​ ಖಾನ್​ಮುಜುಗರಕ್ಕೆ ಒಳಗಾದ ಪ್ರಸಂಗ ಇನ್ನೂ ಹಸಿಹಸಿಯಾಗಿರುವಾಗಲೇ ಸ್ಯಾಂಡಲ್​ವುಡ್​ನಲ್ಲಿ ಖ್ಯಾತ ನಿರ್ಮಾಪಕರೊಬ್ಬರ ಪುತ್ರನ ಪುಂಡಾಟ ಪ್ರಕರಣ ಬಹಿರಂಗಗೊಂಡಿದೆ. ನಟನೂ ಆಗಿರುವ ಈ ಪುತ್ರ ಯಾರದ್ದೋ ಮನೆಯ ಕೆಲಸದವರ ಮೇಲೆ ತನ್ನ ಸ್ನೇಹಿತರೊಂದಿಗೆ ಸೇರಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ಕ್ಲಬ್ ರಸ್ತೆಯಲ್ಲಿ ಇಂದು ಸಂಜೆ ಈ ಹಲ್ಲೆ ಪ್ರಕರಣ ನಡೆದಿದೆ. ಪ್ರತಿಷ್ಠಿತ ಖಾಸಗಿ ಶಾಲೆ ಮಾಲೀಕರ ಮನೆ ಕೆಲಸದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉದ್ಯಮಿ ಮಂಜುಳಾ ಪುರುಷೋತ್ತಮ್ ಎಂಬವರ ಮನೆ ಕೆಲಸವರಾದ ನೀಲಮ್ಮ ಮತ್ತು ಅವರ ಪುತ್ರಿ ಅನುರಾಧಾ ಮೇಲೆ ಈ ನಟ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸಂಜೆ ನೀಲಮ್ಮ ಮತ್ತು ಅನುರಾಧಾ ಹೊರಗಡೆ ಮನೆ ಸ್ವಚ್ಛಗೊಳಿಸುತ್ತಿದ್ದಾಗ ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮನೆ ಸಿಬ್ಬಂದಿಗೆ ಕಸ ತಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ಬಳಿಕ ಸೌಂದರ್ಯ ಜಗದೀಶ್ ಅವರ ಪುತ್ರ, ನಟನೂ ಆಗಿರುವ ಮಾಸ್ಟರ್ ಸ್ನೇಹಿತ್, ಆತನ ತಾಯಿ ರೇಖಾ ಜಗದೀಶ್ ಮತ್ತು ಭದ್ರತಾ ಸಿಬ್ಬಂದಿ ಸೇರಿ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಥರ ಗಲಾಟೆ ಹೊಸದೇನಲ್ಲ. ಈ ಹಿಂದೆಯೂ ಮಾಸ್ಟರ್ ಸ್ನೇಹಿತ್ ಮತ್ತು ಸ್ನೇಹಿತರಿಂದ ಪುಂಡಾಟಿಕೆ ನಡೆದಿದ್ದು, ಇದು ಮೂರನೇ ಸಲ ಎನ್ನಲಾಗಿದೆ. ಈ ಪ್ರಕರಣ ಇದೀಗ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪೊಲೀಸ್ ಠಾಣೆ ಮುಂದೆ ಸಂತ್ರಸ್ತರು
ಪೊಲೀಸ್ ಠಾಣೆ ಮುಂದೆ ಸಂತ್ರಸ್ತರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net