ನವದೆಹಲಿ: ವೆಕೇಷನ್ ಮೂಡ್ನಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲತಿಯೊಂದಿಗೆ ಜಾಲಿಟ್ರಿಪ್ ಮಾಡುತ್ತಿದ್ದು, ಇದರ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋ ತೆಗೆಸಿಕೊಂಡಿರುವ ಪ್ರಿಯಾಂಕ ಚೋಪ್ರಾ ಹನ್ಸಿಕಾ, ನಿಕ್ ಜೋನಸ್ ಸೇರಿದಂತೆ ಖ್ಯಾತನಾಮರು ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ.
ಹಾಲಿವುಡ್ನಲ್ಲಿ ಸಕ್ರಿಯವಾಗಿರುವ ಪ್ರಿಯಾಂಕ ವೆಬ್ ಸರಣಿ ಹಾಗೂ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಸಾಕಷ್ಟು ಬೇಡಿಕೆಯನ್ನು ಹೊಂದಿದ್ದಾರೆ. ಬಾಲಿವುಡ್ನಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಅಂಬಾನಿ ಮಗನ ಮದುವೆಗೆ ಪತಿ ನಿಕ್ ಜೊತೆ ಆಗಮಿಸಿದ್ದರು.
ವಿದೇಶದಲ್ಲಿದ್ದರು ಭಾರತದ ಸಂಸ್ಕೃತಿಯನ್ನು ಪಾಲಿಸುತ್ತಿರುವ ಪ್ರಿಯಾಂಕಾ ಭಾರತೀಯ ಸಂಪ್ರದಾಯವನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಪ್ರತಿ ಹಬ್ಬದ ಆಚರಣೆಯ ಫೋಟೋ ಹಾಗು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಭಅರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.