VIDEO| ನದಿಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿ 8 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ

Drowning

ಗಾಂಧಿನಗರ: ನದಿಯಲ್ಲಿ ಸ್ನಾನ ಮಾಡಲು ಹೋಗಿ ಎಂಟು ಮಂದಿ ಯುವಕರು ನೀರಿನಲ್ಲಿ ಮಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ಗುಜರಾತ್​ನ ಗಾಂಧಿನಗರದಲ್ಲಿರುವ ಮೆಶ್ವೋ ಅಣೆಕಟ್ಟಿನಲ್ಲಿ ನಡೆದಿದೆ. ವಾಸನ ಸೊಗತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಘಟನೆ ಕುರಿತು ಮಾತನಾಡಿರುವ ಡೆಪ್ಯೂಟಿ ಎಸ್​ಪಿ ಡಿಟಿ ಗೋಯೆಲ್​, ದೇಹಗಾಮ್​ ತಾಲ್ಲೂಕಿನ ವಾಸನ ಸೊಗತಿ ಗ್ರಾಮದ ಒಂಬತ್ತು ಜನ ಯುವಕರು ತಮ್ಮ ಗ್ರಾಮದ ಬಳಿ ಇರುವ ಮೆಶ್ವೋ ನದಿಗೆ ಹೋಗಿದ್ದಾರೆ. ಯುವಕರು ನೀರಿಗೆ ಇಳಿದಿದ್ದು, ಓರ್ವ ಮುಳುಗಿದ್ದಾನೆ. ಇದೇ ವೇಳೆ ಗಣೇಶ ವಿಸರ್ಜನೆಗೆಂದು ಬಂದಿದ್ದ ಜನರು ಯುವಕರಿಗೆ ಈ ಬಗ್ಗೆ ಹೇಳಿದ್ದು, ಓರ್ವನನ್ನು ರಕ್ಷಿಸಲು ಹೋಗಿ ಎಂಟು ಮಂದಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.

ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆ ಆಧರಿಸಿ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕಾಣೆಯಾದವರ ಹುಟುಕಾಟ ನಡೆಯುತ್ತಿದೆ. ಎಸ್​ಡಿಆರ್​ಎಫ್​ ಹಾಗೂ ಎನ್​ಡಿಆರ್​ಎಫ್​ ತಂಡಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಡೆಪ್ಯೂಟಿ ಎಸ್​ಪಿ ಡಿಟಿ ಗೋಯೆಲ್ ತಿಳಿಸಿದ್ದಾರೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗುಜರಾತ್​ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಂತೆ ಸೂಚಿಸಿದ್ಧಾರೆ.

Share This Article

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗಲು ಕಾರಣ ಏನು ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಹಜ. ಈ ಅವಧಿಯಲ್ಲಿ ತೂಕ ಹೆಚ್ಚಾಗುವುದು ಮಗು ಸರಿಯಾಗಿ ಬೆಳೆಯುತ್ತಿದೆ ಎಂಬುದರ…

ಗರ್ಭಿಣಿಯರು ಈ ಪದಾರ್ಥಗಳಿಂದ ದೂರವಿರಿ; ಇಲ್ಲವಾದಲ್ಲಿ ಮಗುವಿಗೆ ಅಪಾಯ ತಪ್ಪಿದ್ದಲ್ಲ | Health Tips

ಪ್ರತಿಯೊಬ್ಬ ಮಹಿಳೆಯೂ ತನ್ನ ಗರ್ಭಾವಸ್ಥೆಯು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. ಇದರಿಂದ ತಾಯಿ ಮತ್ತು ಭ್ರೂಣದ ಆರೋಗ್ಯವು…

ಮದುವೆಯಾಗಲು ಸೂಕ್ತ ವಯಸ್ಸು ಯಾವುದು?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ … | Marriage

ನಮ್ಮಲ್ಲಿ ಹೆಚ್ಚಿನವರು ತಾವು ಬಯಸಿ ಅಥವಾ ಬಯಸದಿದ್ದರೂ ಒಂದು ಹಂತದಲ್ಲಿ ಮದುವೆಯಾಗಲು ಒತ್ತಡವನ್ನು ಅನುಭವಿಸುತ್ತಾರೆ. ವಯಸ್ಸು…