More

    ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 22 ವರ್ಷ; ದಳಪತಿಯೊಂದಿಗಿನ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

    ಮುಂಬೈ: ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​ ಚಿತ್ರಗಳಲ್ಲಿಯೂ ಬ್ಯುಸಿ ಇರುವ ಮಾಜಿ ವಿಶ್ವ ಸುಂದರಿ, ನಟಿ ಪ್ರಿಯಾಂಕಾ ಚೋಪ್ರಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 22 ವರ್ಷಗಳು ಕಳೆದಿವೆ. ಅವರ ನಟನೆಯ ಚೊಚ್ಚಲ ಚಿತ್ರ ತಮಿಳನ್​ ಇಂದಿಗೆ (ಏಪ್ರಿಲ್​ 12) ಬಿಡುಗಡೆಯಾಗಿ 22 ವರ್ಷಗಳು ಕಳೆದಿದ್ದು, ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    2002 ಏಪ್ರಿಲ್​ 12ರಂದು ಪ್ರಿಯಾಂಕಾ ಚೋಪ್ರಾ ನಟನೆಯ ಚೊಚ್ಚಲ ತಮಿಳು ಚಿತ್ರ ತಮಿಳನ್​ ಬಿಡುಗಡೆಯಾಗಿತ್ತು. ಮಜಿತ್​ ನಿರ್ದೇಶನದ ಈ ಚಿತ್ರದಲ್ಲಿ ಅವರು ದಳಪತಿ ವಿಜಯ್​ಗೆ ಜೋಡಿಯಾಗಿ ನಟಿಸಿದ್ದರು. ಇದಾದ ಬಳಿಕ ಬಾಲಿವುಡ್​ ಪ್ರವೇಶಿಸಿದ ನಟಿ ಪ್ರಿಯಾಂಕಾ ಚೋಪ್ರಾ ಆ ನಂತರ ಹಾಲಿವುಡ್​ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.

    Priyanka Chopra

    ಇದನ್ನೂ ಓದಿ: ಸತತ ಸೋಲಿನ ನಡುವೆಯೇ ಆರ್​ಸಿಬಿಗೆ ಮತ್ತೊಂದು ಶಾಕ್​; ಗಾಯಕ್ಕೆ ತುತ್ತಾದ ಸ್ಟಾರ್​ ಆಟಗಾರ

    ಕಳೆದ ಕೆಲ ತಿಂಗಳ ಹಿಂದೆ ಸಂದರ್ಶನ ಒಂದರಲ್ಲಿ ಈ ಕುರಿತು ಮಾತನಾಡಿದ್ದ ನಟಿ ಪ್ರಿಯಾಂಕಾ, ವಿಶ್ವಸುಂದರಿ ಸ್ಪರ್ಧೆಯಾದ ಬಳಿಕ ನಾನು ಒಪ್ಪಿಕೊಂಡ ಮೊದಲ ಚಿತ್ರ ತಮಿಳನ್​. ಮೊದಲಿಗೆ ಶೂಟಿಂಗ್​​ ಸೆಟ್​ಗೆ ಹೋದಾಗ ನನಗೆ ತುಂಬಾ ಕಷ್ಟವಾಗುತ್ತಿತ್ತು. ನನಗೆ ತಮಿಳು ಹೆಚ್ಚು ತಿಳಿಯದ ಕಾರಣ ಮೊದಲಿಗೆ ನಟಿಸಲು ತುಂಬಾ ಕಷ್ಟಪಡುತ್ತಿದ್ದೆ. ಆ ನಂತರ ಸಹ ನಟ ವಿಜಯ್​ ಅವರನ್ನು ನೋಡಿಕೊಂಡು ತುಂಬಾ ಕಲಿತುಕೊಂಡೆ ಅವರು ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ್ದಾರೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

    ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹೆಡ್ಸ್ ಆಫ್ ಸ್ಟೇಟ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು, , ನಟ ದಳಪತಿ ವಿಜಯ್​ ಗ್ರೇಟೆಸ್ಟ್​ ಆಫ್ ಆಲ್​ ಟೈಮ್​ (GOAT) ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts