ಭಗವದ್ಗೀತೆ ಕೊಟ್ಟು ಮನೆಯ ಗೃಹಪ್ರವೇಶಕ್ಕೆ ವಿಭಿನ್ನವಾಗಿ ಆಹ್ವಾನಿಸಿದ ನಟ ಕೃಷ್ಣ ಅಜಯ್​ ರಾವ್​

Ajay Rao
Published on

ಬೆಂಗಳೂರು: ಜೀವನದಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಸ್ವಂತ ಮನೆಯೊಂದನ್ನು ಕಟ್ಟಿಸಿ ಅದರಲ್ಲಿ ಬಾಳಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಅದರಂತೆ ತಾವು ದುಡಿದ ಹಣದಲ್ಲಿ ಸ್ವಂತ ಮನೆಯನ್ನು ಕಟ್ಟಿಸಿ ಅದ್ದೂರಿಯಾಗಿ ಗೃಹಪ್ರವೇಶ ಮಾಡಬೇಕೆಂದು ಅಂದುಕೊಂಡಿರುತ್ತಾರೆ. ಇದೀಗ ನಟ ಅಜಯ್​ ರಾವ್​ ತಮ್ಮ ಮನೆಯ ಗೃಪ್ರವೇಶಕ್ಕೆ ಸ್ಯಾಂಡಲ್​ವುಡ್​ನ ಪ್ರಮುಖರನ್ನು ವಿಭಿನ್ನವಾಗಿ ಆಹ್ವಾನಿಸುವ ಮೂಲಕ ಸುದ್ದಿಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ನಟ ಕೃಷ್ಣ ಅಜಯ್​ ರಾವ್​ ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಕಟ್ಟಿಸಿದ್ದು, ಸೆಲೆಬ್ರಿಟಿಗಳ ಮನೆಗೆ ಭೇಟಿ ನೀಡಿ ಆಹ್ವಾನಿಸುತ್ತಿದ್ದಾರೆ. ಆದರೆ, ಅವರು ಆಹ್ವಾನ ಪತ್ರಿಕೆ ಬದಲು ಭಗವದ್ಗೀತೆಯನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದ್ದು, ಹಲವರು ನಟನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನಟ ಅಜಯ್​ ರಾವ್ ದಂಪತಿ ಯಶ್​, ಅಶ್ವಿನಿ ಪುನೀತ್​​ ರಾಜ್​ಕುಮಾರ್​, ಉಪೇಂದ್ರ, ಜಗ್ಗೇಶ್​, ನೆನಪಿರಲಿ ಪ್ರೇಮ್​, ಸಂಜನಾ ಆನಂದ್, ಮಯೂರಿ ಕ್ಯಾತರಿ ಸೇರಿದಂತೆ ಹಲವರನ್ನು ಆಹ್ವಾನಿಸಿದ್ದಾರೆ.

Ajay Rao House
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net