ಹೇಗಿತ್ತು ಅಮೆರಿಕದಲ್ಲಿ ಪ್ರಿಯಾಂಕಾ ಚೋಪ್ರಾ ಹೋಳಿ ಸಂಭ್ರಮ? ಫೋಟೋಗಳು ವೈರಲ್

Published on
ಅಮೆರಿಕ: ಮಾರ್ಚ್ 18 ರಂದು ಇಡೀ ಭಾರತ ದೇಶದಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಆದರೆ, ಅಮೆರಿಕದಲ್ಲೂ ನಮ್ಮ ಹೋಳಿ ಹಬ್ಬದ ಸಂಭ್ರಮ ಜೋರಾಗಿಯಯೆ ಇತ್ತು ಎನ್ನಬಹುದು. ಇದಕ್ಕೆ ಕಾರಣ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದ ವಿಧಾನ. ಅಂದಹಾಗೆ, ತಮ್ಮ ರೋಮ್ ಹಾಗೂ ಇಟಲಿ ಪ್ರವಾಸ ಮುಗಿಸಿಕೊಂಡು ಕೆಲ ದಿನಗಳ ಹಿಂದೆಯೇ ಈ ದಂಪತಿ ಲಾಸ್ ಏಂಜಲೀಸ್​ಗೆ ವಾಪಸ್ಸಾಗಿದ್ದರು.
ಇನ್ನು, ಪತಿ ನಿಕ್ ಜೋನಾಸ್ ಅವರೊಂದಿಗೆ ಹೋಳಿ ಹಬ್ಬವನ್ನು ಪ್ರಿಯಾಂಕಾ ಭರ್ಜರಿಯಾಗಿ ಆಚರಿಸಿದ್ದು, ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೋಳಿಯ ಸಂಭ್ರಮದಲ್ಲಿ ನಿಕ್ ಜೋನಾಸ್ ತಮ್ಮ ಬಟ್ಟೆ ಪೂರ್ತಿ ಬಣ್ಣಗಳಿಂದ ತುಂಬಿರುವ ರೀತಿಯಲ್ಲಿ ಕಂಡು ಬಂದಿದ್ದು, ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ, 39 ವರ್ಷದ ನಟಿ ಪ್ರಿಯಾಂಕಾ ಬಾಡಿಗೆ ತಾಯ್ತನದ ಮೂಲಕ ತಾಯಿಯಾಗಿದ್ದರು. ಹಾಗಾಗಿ, ಈ ಬಾರಿಯ ಹೋಳಿ ಹಬ್ಬ ಈ ದಂಪತಿಗೆ ತುಂಬಾನೆ ವಿಶೇಷವಾಗಿತ್ತು ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net