ನಿನ್ನ ಒಳಉಡುಪು ನೋಡಬಹುದೇ? ನಿರ್ದೇಶಕನ ಅಸಲಿ ಮುಖ ಬಯಲು ಮಾಡಿದ ಪ್ರಿಯಾಂಕಾ ಚೋಪ್ರಾ! Priyanka Chopra

Priyanka Chopra
Published on

Priyanka Chopra : ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ವೃತ್ತಿ ಜೀವನದ ಆರಂಭದಲ್ಲಿ ಅಂದರೆ, ತನ್ನ 19ನೇ ವಯಸ್ಸಿನಲ್ಲಿ ನಿರ್ದೇಶಕರೊಬ್ಬರಿಂದ ಎದುರಿಸಿದ ಕೆಟ್ಟ ಅನುಭವವನ್ನು ಮಾದ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಫೋರ್ಬ್ಸ್ ಪವರ್ ವುಮೆನ್ ಶೃಂಗಸಭೆಯಲ್ಲಿ ಪ್ರಿಯಾಂಕಾ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ತನ್ನ ಸ್ಟೈಲಿಸ್ಟ್‌ಗೆ ವಿವರಿಸುವಂತೆ ನಿರ್ದೇಶಕರಿಗೆ ಹೇಳಿದ್ದರಂತೆ. ಈ ವೇಳೆ ಸಿನಿಮಾಗೆ ಬೇಕಾದ ಉಡುಗೆಯ ಬಗ್ಗೆ ನಿರ್ದೇಶಕರು ಹೇಳಿದ್ದನ್ನು ಕೇಳಿ ಸ್ವತಃ ಪ್ರಿಯಾಂಕಾ ಅವರೇ ಒಂದು ಕ್ಷಣ ಶಾಕ್​ ಆದರಂತೆ.

ಇದು ನಡೆದಿದ್ದು 19ನೇ ವಯಸ್ಸಿನಲ್ಲಿ. ಈ ವೇಳೆ ನಾನು ಬಾಲಿವುಡ್ ಸಿನಿಮಾವೊಂದರಲ್ಲಿ ಕೆಲಸ ಮಾಡಬೇಕಿತ್ತು. ನಿರ್ದೇಶಕರೊಬ್ಬರು ನನ್ನನ್ನು ಸಂಪರ್ಕಿಸಿದರು. ನನ್ನ ಪಾತ್ರಕ್ಕೆ ಬೇಕಾದ ವೇಷಭೂಷಣದ ಬಗ್ಗೆ ನನ್ನ ಸ್ಟೈಲಿಸ್ಟ್ ಜೊತೆ ಮಾತನಾಡಲು ನಿರ್ದೇಶಕರನ್ನು ಕೇಳಿಕೊಂಡೆ. ನನ್ನ ಸ್ಟೈಲಿಸ್ಟ್​ ಫೋನ್​ ತೆಗೆದುಕೊಂಡಾಗ ಆ ಕಡೆಯಿಂದ ಮಾತನಾಡಿದ ನಿರ್ದೇಶಕ, ಕೇಳು ಅವಳು (ಪ್ರಿಯಾಂಕಾ ಚೋಪ್ರಾ) ತನ್ನ ಒಳಉಡುಪನ್ನು ತೋರಿಸಿದರೆ ಮಾತ್ರ ಜನರು ಅವಳನ್ನು ನೋಡಲು ಚಿತ್ರಮಂದಿರಕ್ಕೆ ಬರುತ್ತಾರೆ. ಆದ್ದರಿಂದ ಅವಳು ಧರಿಸುವ ಒಳಉಡುಪು ನಿಜವಾಗಿಯೂ ಚಿಕ್ಕದಾಗಿರಬೇಕು. ಆದ್ದರಿಂದ ನಾನು ಅವಳನ್ನು ಒಳಉಡುಪಿನಲ್ಲಿ ನೋಡಬಹುದೇ. ನಿಮಗೆ ಮುಂದೆ ಕುಳಿತಿರುವ ಜನರು ಗೊತ್ತಾ? ಅವರಿಗೂ ಅವಳ ಒಳಉಡುಪು ಕಾಣಬೇಕು. ಈ ಮಾತನ್ನು ಅವನು ನಾಲ್ಕು ಬಾರಿ ಹೇಳಿದನು. ಅದು ಕೂಡ ಹಿಂದಿಯಲ್ಲಿ. ಅದನ್ನು ಹೇಳೋದಕ್ಕೂ ಆಗುವುದಿಲ್ಲ. ಅಷ್ಟು ಕೆಟ್ಟದಾಗಿದೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

ಈ ಮಾತನ್ನು ಕೇಳಿದ ನಂತರ ಪ್ರಿಯಾಂಕಾ ಅವರು ತಮ್ಮ ತಾಯಿ ಮಧು ಚೋಪ್ರಾ ಬಳಿ ಬಂದು ಆ ನಿರ್ದೇಶಕನ ಮುಖವನ್ನು ನೋಡಲು ಸಹ ನನಗೆ ಇಷ್ಟವಿಲ್ಲ ಎಂದು ಹೇಳಿದರಂತೆ. ಈ ಘಟನೆಯಿಂದಾಗಿ ಪ್ರಿಯಾಂಕಾ ಆ ಚಿತ್ರದಿಂದ ಹೊರನಡೆದರು. ಇಲ್ಲಿಯವರೆಗೆ ನಾನು ಚಲನಚಿತ್ರ ನಿರ್ಮಾಪಕರೊಂದಿಗೆ ಅಥವಾ ನಿರ್ದೇಶಕರೊಂದಿಗೆ ಎಂದಿಗೂ ಸಹಕರಿಸಿಲ್ಲ ಎಂದು ಹೇಳಿದರು.

ಈ ಘಟನೆ ನಡೆದರೂ ನಂತರದ ವರ್ಷಗಳಲ್ಲಿ ಪ್ರಿಯಾಂಕಾ ತಮ್ಮ ನಟನಾ ವೃತ್ತಿಜೀವನದಲ್ಲಿ ಎತ್ತರಕ್ಕೆ ಏರಿದರು ಮತ್ತು ಹಲವಾರು ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅಭಿನಯವನ್ನು ನೀಡಿದರು.

ಪ್ರಿಯಾಂಕಾ ಚೋಪ್ರಾ 18ನೇ ವಯಸ್ಸಿನಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ನಂತರ ನಟನಾ ಜಗತ್ತಿಗೆ ಪ್ರವೇಶಿಸಿದರು. ಪ್ರಿಯಾಂಕಾ 2002ರಲ್ಲಿ ವಿಜಯ್ ನಟಿಸಿದ ತಮಿಳು ಚಿತ್ರ ತಮಿಳನ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2003ರಲ್ಲಿ ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net