

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭೆಗಳ ಉಪಚುನಾವಣೆಯಲ್ಲಿ (ByElection) ಸೋಲು ಭೀತಿಯಿಂದ ಬಿಜೆಪಿ-ಜೆಡಿಎಸ್ ವಕ್ಫ್ ವಿವಾದವನ್ನ ಮಾಡ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ.
ವಿಕಾಸಸೌಧದಲ್ಲಿ ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮತ್ತೆರಡು ಜಿಲ್ಲೆ ರೈತರ ಜಮೀನು ಮತ್ತು ಸಿಂದಗಿ ಮಠದ ಜಾಗ ವಕ್ಫ್ ಆಸ್ತಿ ಅಂತಾ ನಮೂದು ಆಗಿರೋ ವಿಚಾರ ಬಿಜೆಪಿ-ಜೆಡಿಎಸ್ ಮಾಡ್ತಿರೋ ರಾಜಕೀಯ ಎಂದು ಕಿಡಿಕಾರಿದ್ದಾರೆ.
ವಕ್ಫ್ ವಿವಾದಕ್ಕೆ ಸಂಬಂದಿಸಿದಂತೆ ಸಚಿವ ಎಂ.ಬಿ. ಪಾಟೀಲ್ ಈಗಾಗಲೇ ವಿವರಣೆ ಕೊಟ್ಡಿದ್ದಾರೆ. ಯಾರು ಬೇಕಾದರೂ ಇದು ನಮ್ಮ ಆಸ್ತಿ ಕ್ಲೈಮ್ ಮಾಡಬಹುದು ಎಂದು ಹೇಳಿದ್ದಾರೆ. ಅದಕ್ಕೆ ಬೇಕಾಗಿರೋದು ದಾಖಲಾತಿ. ದಾಖಲಾತಿ ಇದ್ದರೆ ಏನು ತೊಂದರೆ ಇಲ್ಲ ಅಂತಾ ಸಚಿವರು ಹೇಳಿದ್ದಾರೆ. ವಕ್ಫ್ ಅದಾಲತ್ ಆದಾಗ ನಮ್ಮ ಜಾಗ ಅಂತಾ ಕೆಲವರು ಹೇಳಿದ್ದಾರೆ. ಆದರೆ ಅದಕ್ಕೆ ಯಾರು ಆತಂಕ ಪಡೋ ಅಗತ್ಯ ಇಲ್ಲ. ಈಗಾಗಲೇ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ರೈತರ ಜಾಗ ಸರ್ಕಾರ ವಾಪಸ್ ಪಡೆಯಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲ.
ಈ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನವರು ರಾಜಕೀಯ ಮಾಡುತ್ತಿದ್ದಾರೆ. ಯಾವುದು ದಾಖಲಾತಿ ಇರುತ್ತೋ ಆ ಆಸ್ತಿ ರೈತರಿಗೆ ಇರುತ್ತೆ. ಆದರು ಬಿಜೆಪಿ-ಜೆಡಿಎಸ್ ಅವರು ವಿವಾದ ಮಾಡ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ಗೆ ಸೋಲುವ ಭೀತಿ ಇದೆ. ಹೀಗಾಗಿ ವಿವಾದ ಮಾಡ್ತಿದ್ದಾರೆ. ಹಿಂದೂ-ಮುಸ್ಲಿಂ ಅಂತಾ ಮಾಡಿದ್ರೆ ಗೆಲ್ಲಬಹುದು ಅನ್ನೋದು ಇವರ ಪ್ಲ್ಯಾನ್ ಎಂದು ಆರೋಪಿಸಿದ್ದಾರೆ.
ವಕ್ಫ್ ವಿವಾದಕ್ಕೆ ಸಂಬಂದಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಲಾಭ ಮಾಡೋಕೆ ಇವರು ಹೀಗೆ ಹೇಳ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಅಂತಾ ದೇವೇಗೌಡ್ರು ಹೇಳಿದ್ರು. ಈ ಮಾತನ್ನು ಕುಮಾರಸ್ವಾಮಿ ಅವರು ಮರೆತಂತೆ ಕಾಣುತ್ತಿದೆ. ಓಲೈಕೆ ರಾಜಕೀಯ ಮಾಡ್ತಿರೋರು ಯಾರು ಅಂತಾ ಪ್ರಶ್ನೆ ಮಾಡಿದ್ರು. ಇದೇ ಕುಮಾರಸ್ವಾಮಿ ಆರ್‌ಎಸ್‌ಎಸ್ ಬಗ್ಗೆ ಏನ್ ಮಾತಾಡಿದ್ರು ಎಲ್ಲರಿಗೂ ಗೊತ್ತಿದೆ. ಲೇಖನ ಕೂಡಾ ಬರೆದಿದ್ದರು. ಅಧಿಕಾರ ಕೊಟ್ಟಾಗ ಎಲ್ಲವೂ ಉಲ್ಟಾ ಆಗುತ್ತಾ. ಕುಮಾರಸ್ವಾಮಿ ಅವರು ಅಂದು ವಿರೋಧ ಮಾಡಿ ಇಂದು ಅಧಿಕಾರಕ್ಕಾಗಿ ಹೀಗೆ ಮಾತಾಡೋದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.