More

    ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದಕ್ಕೆ ಟ್ರೋಲ್​; ನೆಟ್ಟಿಗರ ಚಳಿ ಬಿಡಿಸಿದ ಕಣ್ಸನ್ನೇ ಸುಂದರಿ!

    ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾ ಮಂದಿ ನಾನಾ ವಿಚಾರಕ್ಕೆ ಟ್ರೋಲ್​ ಆಗುತ್ತಾರೆ. ಆಡುವ ಮಾತಿನಿಂದ ಹಿಡಿದು ಧರಿಸುವ ಬಟ್ಟೆಯೂ ಅವರನ್ನು ಒಮ್ಮೊಮ್ಮೆ ಟ್ರೋಲ್​ಗೆ ಆಹಾರವನ್ನಾಗಿಸುತ್ತದೆ. ಇದೀಗ ಅದೇ ಕಣ್ಸನ್ನೇ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್​ ಸಹ ಧರಿಸಿದ ಬಟ್ಟೆಯಿಂದಲೇ ಸುದ್ದಿಯಾಗಿದ್ದಾರೆ.

    ಇದನ್ನೂ ಓದಿ: ನನ್ನ ನಿಜವಾದ ಹೆಸರು ಇಂಕ್ವಿಲಾಬ್​ ಅಲ್ಲ … ಅಮಿತಾಭ್​ ಬಚ್ಚನ್​ ಸ್ಪಷ್ಟನೆ

    ಎದೆ ಭಾಗ ಗೋಚರವಾಗುವಂತಹ ಹೊಸ ಬಗೆಯ ವಿನ್ಯಾಸದ ದಿರಿಸಿನ ಫೋಟೋವೊಂದನ್ನು ಪ್ರಿಯಾ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ರೀತಿಯ ಫೋಟೋ ಹಾಕಿದ್ದೇ ತಡ ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್​ಗಳನ್ನು ಹರಿಬಿಟ್ಟಿದ್ದಾರೆ. ಅಶ್ಲೀಲವಾಗಿ ಮತ್ತು ಕೆಟ್ಟಕೆಟ್ಟದಾಗಿ ಕಮೆಂಟ್​ ಮಾಡುತ್ತಿದ್ದಾರೆ.


    ಆ ಕಮೆಂಟ್​ಗಳಿಗೆ ಪ್ರತಿಕ್ರಿಯಿಸಿರುವ ಅವರು, ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ‘ಹೇ ಗಾಯ್ಸ್.. ನಿಮ್ಮ ಬಹುತೇಕ ಎಲ್ಲ ಕಮೆಂಟ್​ಗಳನ್ನು ನಾನು ನೋಡಿದ್ದೇನೆ. ಹಾಗೇ ಕೆಟ್ಟಕೆಟ್ಟದಾಗಿ ಕಮೆಂಟ್​ ಮಾಡಿದ ನಿಮಗೆಲ್ಲ ಒಂದು ಚಪ್ಪಾಳೆ ನೀಡಲೇಬೇಕು. ಇಷ್ಟೆಲ್ಲ ಏರಿಳಿತಗಳನ್ನು ದಾಟಿಕೊಂಡು ನಾನು ಇಲ್ಲಿಯವರೆಗೂ ಬಂದಿದ್ದೇನೆ. ಅದು ನನಗೆ ಹೆಮ್ಮೆಯ ವಿಷಯ. ಹೀಗೆ ಬೆದರಿಸುವ ಕಮೆಂಟ್​ ಮಾಡುವವರನ್ನು ನಾನು ನಿತ್ಯ ನೋಡುತ್ತೇನೆ. ಅದರಿಂದ ಏನೂ ಸಾಧ್ಯವಾಗದು. ಮೊಡಲು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ’ ಎಂಬರ್ಥದಲ್ಲಿ ಟಾಂಗ್​ ನೀಡಿದ್ದಾರೆ.

    ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದಕ್ಕೆ ಟ್ರೋಲ್​; ನೆಟ್ಟಿಗರ ಚಳಿ ಬಿಡಿಸಿದ ಕಣ್ಸನ್ನೇ ಸುಂದರಿ!


    ಕನ್ನಡದ ವಿಷ್ಣುಪ್ರಿಯಾ ಸಿನಿಮಾ ಸೇರಿ ತೆಲುಗಿನಲ್ಲಿಯೂ ಹಲವು ಪ್ರಾಜೆಕ್ಟ್ಗಳಲ್ಲಿ ಪ್ರಿಯಾ ಬಿಜಿಯಾಗಿದ್ದಾರೆ. ಜತೆಗೆ ಜಾಹೀರಾತುಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. (ಏಜೆನ್ಸೀಸ್​)

    ಬಾಯ್​ಫ್ರೆಂಡ್​ ಬಗ್ಗೆ ಮಾತನಾಡದ ತಾಪ್ಸಿ, ಈಗ ಬಾಯ್​ಫ್ರೆಂಡ್​ ಜತೆಗೇ ಸಿಕ್ಕಿಬಿದ್ದಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts